ಭಾರತ, ಫೆಬ್ರವರಿ 11 -- Amruthadhaare serial Yesterday Episode: ಒಂದೆಡೆ ಶಕುಂತಲಾದೇವಿಯು ಭಾಗ್ಯಕ್ಕನ ಮನಗೆಲ್ಲಲು ಪ್ರಯತ್ನಿಸುತ್ತಾಳೆ. ಈಕೆಯ ಗೆಳೆತನ ಮಾಡಿಕೊಂಡರೆ ಹೇಗೋ ಬದುಕಬಹುದು ಎಂಬ ಆಲೋಚನೆ ಅವರದ್ದು. ಇದೇ ಸಮಯದಲ್ಲಿ ಲಕ್ಕಿ ಲಕ್ಷ್ಮಿಕಾಂತ್‌ ಭಾಗ್ಯಮ್ಮನ ಮಾತ್ರೆಯನ್ನೂ ಬದಲಾಯಿಸುತ್ತಾನೆ. ಈ ಮೂಲಕ ಈಕೆ ಗುಣವಾಗಬಾರದು ಎಂದು ಇವರಿಬ್ಬರು ಪ್ಲ್ಯಾನ್‌ ಮಾಡುತ್ತಾರೆ. ಈ ಸಮಯದಲ್ಲಿ ಸುಧಾ ಬರುತ್ತಾರೆ. "ಇವರನ್ನು ಆಗದಿಂದ ಮಾತನಾಡಿಸಲು ಪ್ರಯತ್ನಿಸ್ತಾ ಇದ್ದೆ. ಮಾತನಾಡ್ತಾ ಇಲ್ಲ" ಎಂದು ಶಕುಂತಲಾದೇವಿ ಹೇಳುತ್ತಾರೆ. ಈ ಸಮಯದಲ್ಲಿ ಸುಧಾ ಹಾಲು ನೀಡಲು ಮುಂದಾಗುತ್ತಾರೆ. ಅದರಲ್ಲಿ ಶಕುಂತಲಾ ಮಿಕ್ಸ್‌ ಮಾಡಿರುವ ಔಷಧ ಇರುತ್ತದೆ.

ಮಹಿಮಾ ಚಿಂತೆಯಿಂದ ಯೋಚಿಸುತ್ತಾಳೆ. ಆಗ ಅಲ್ಲಿಗೆ ಮಂದಾಕಿನಿ ಬರುತ್ತಾರೆ. ಮಹಿಮಾಗೆ ಒಂದಿಷ್ಟು ಸಮಾಧಾನ ಮಾಡುತ್ತಾರೆ. "ನಿನ್ನೆ ಆಗಿರುವ ಕೆಟ್ಟದ್ದನ್ನು ಮರೆತು ನಾಳೆಯ ಬಗ್ಗೆ ಯೋಚನೆ ಮಾಡಬೇಕು" ಎಂದು ಮಂದಾಕಿನಿ ಹೇಳುತ್ತಾರೆ. "ನೀನು ಮತ್ತು ಜೀವ ಒಂದು ಮಗು ಮಾಡಿಕೊಳ್ಳಿ. ಬದುಕು ಚೆನ್...