ಭಾರತ, ಫೆಬ್ರವರಿ 28 -- ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾದೇವಿ ಹೊಸ ದಾಳ ಉರುಳಿಸಿದ್ದಾರೆ. ನೀನೇ ಗೌತಮ್‌ಗೆ ಮುಂದೆ ನಿಂತು ಮದುವೆ ಮಾಡು ಎಂದು ಭೂಮಿಕಾಗೆ ಶಕುಂತಲಾದೇವಿ ಹೇಳಿದ್ದಾರೆ. ತನ್ನ ಅತ್ತೆ ಹೇಳಿದಂತೆ ತಾನೇ ಗೌತಮ್‌ಗೆ ಭೂಮಿಕಾ ಹೆಣ್ಣು ಹುಡುಕುವ ಸಂಚಿಕೆಗಳು ಮುಂದಿನ ದಿನಗಳಲ್ಲಿ ಇದ್ದರೂ ಅಚ್ಚರಿಯಿಲ್ಲ. ಜೀ ಕನ್ನಡ ವಾಹಿನಿಯು ಇಂದು ಬಿಡುಗಡೆ ಮಾಡಿದ ಪ್ರೊಮೊದಲ್ಲಿ ಶಕುಂತಲಾದೇವಿಯು ಭೂಮಿಕಾ ಜತೆ ಮಾತನಾಡುತ್ತಾರೆ. ಗೌತಮ್‌ಗೆ ಭವಿಷ್ಯದಲ್ಲಿ ಬೇಸರವಾಗಬಹುದು. ಇಂತಹ ಸಂದರ್ಭದಲ್ಲಿ ನೀನೇ ಏನಾದರೂ ದೃಢ ನಿರ್ಧಾರ ಕೈಗೊಳ್ಳಬೇಕು ಎನ್ನುತ್ತಾರೆ.

ಇಂದಿನ ಎಪಿಸೋಡ್‌ನಲ್ಲಿ ಭೂಮಿಕಾಗೆ ಉಭಯಸಂಕಟವಾಗುವಂತಹ ಮಾತೊಂದನ್ನು ಶಕುಂತಲಾದೇವಿ ಹೇಳಿದ್ದಾರೆ. "ದೇವರು ನಿನಗೆ ಇಷ್ಟು ದೊಡ್ಡ ಅನ್ಯಾಯ ಮಾಡಬಾರದಿತ್ತು" ಎಂದು ಶಕುಂತಲಾದೇವಿ ನಾಟಕೀಯವಾಗಿ ಹೇಳುತ್ತಾರೆ. ಭೂಮಿಕಾಳ ಮುಂದೆ ಬೇಸರದ ಮಾತುಗಳನ್ನು ಆಡುತ್ತಾರೆ. ಈಕೆ ಮಾಡುತ್ತಿರುವುದು ನಾಟಕ ಎಂದು ಭೂಮಿಕಾಳಿಗೆ ತಿಳಿದಿಲ್ಲ. "ದೇವರು ನಿನಗೆ ಅನ್ಯಾಯ ಮಾಡಿ...