ಭಾರತ, ಏಪ್ರಿಲ್ 3 -- Amruthadhaare serial Yesterday Episode : ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆ (ಏಪ್ರಿಲ್‌ 3)ಯಲ್ಲಿ ಮಹತ್ವದ ಘಟನೆಯೊಂದು ನಡೆದಿದೆ. ಜೈದೇವ್‌ ಮತ್ತು ದಿಯಾಳ ಮದುವೆ ನಡೆಯುತ್ತಿರುವುದನ್ನು ಗಮನಿಸಿದ ಮಲ್ಲಿ ತನ್ನ ಗೆಳತಿ ಶ್ರಾವಣಿಗೆ ಫೋನ್‌ ಮಾಡಿದ್ದಾಳೆ. ತಾಳಿ ಕಟ್ಟಿ ಎಂದು ಆರ್ಚಕರು ಹೇಳುತ್ತಾರೆ. "ವಿಲನ್‌ ಅಂಕಲ್‌ ಯಾಕೆ ಬಂದಿಲ್ಲ" ಎಂದು ಜೈದೇವ್‌ ಯೋಚಿಸುತ್ತಾನೆ. ದಿಯಾ ಖುಷಿಯಲ್ಲಿದ್ದಾಳೆ. ಜೈದೇವ್‌ ಕೂಡ ನಗುನಗುತ್ತಾ ತಾಳಿ ಕಟ್ಟಲು ಮುಂದಾಗುತ್ತಾನೆ. ಆಗ ನಿಲ್ಸಿ ಎಂಬ ಸದ್ದು ಕೇಳಿಸುತ್ತದೆ. ಅಲ್ಲಿಗೆ ಶ್ರಾವಣಿಯ ಎಂಟ್ರಿಯಾಗುತ್ತದೆ. ಆಕೆಯ ಜತೆ ಪೊಲೀಸರೂ ಇದ್ದಾರೆ.

ಸದಾಶಿವನನ್ನು ಮಹಿಮಾ ಮತ್ತು ಮಂದಾಕಿನಿ ಹೊಗಳುತ್ತಿದ್ದಾರೆ. ನೀವು ರೊಚ್ಚಿಗೆದ್ದದನ್ನು ನೋಡಿ ಖುಷಿಯಾಯ್ತು ಎಂದು ಅವರಿಬ್ಬರು ಹೇಳುತ್ತಾರೆ. ಹಸುವಿನಂತೆ ಇದ್ದವರು ಹುಲಿಯಂತೆ ಗತ್ತಿನಿಂದ ಅಬ್ಬರಿಸಿದ್ದೀರಿ ಎಂದು ಮಂದಾಕಿನಿ ಹೊಗಳುತ್ತಾರೆ. "ಒಳ್ಳೆಯ ಮಾತಿನಿಂದ ಹೇಳಿದ್ರೆ ಕೇಳಲಿಲ್ಲ. ಅಳಿಯರು ಇದ್ದಾರೆ ಎಂದು ಅವಾಜ...