ಭಾರತ, ಮಾರ್ಚ್ 13 -- Amruthadhaare Serial: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ "ಗೌತಮ್‌ ದಿವಾನ್‌ ಎರಡನೇ ಮದುವೆ ಪ್ರಸಂಗ" ಅನಿರೀಕ್ಷಿತ ತಿರುವಿನೊಂದಿಗೆ ಮುಂದುವರೆದಿದೆ. ಮಧುರಾ ಎಂಬ ಹೆಣ್ಣು ಮಗಳ ಜತೆ ಗೌತಮ್‌ನ ಎರಡನೇ ಮದುವೆ ಮಾಡಲು ಶಕುಂತಲಾದೇವಿ ಮುಂದಾಗಿದ್ದರು. ಆದರೆ, ಇದೇ ಸಮಯದಲ್ಲಿ ಭೂಮಿಕಾ ತಲೆತಿರುಗಿ ಬಿದ್ದಿದ್ದಾರೆ. ಇವರು ಪ್ರೆಗ್ನೆಂಟ್‌ ಎಂದು ಅಲ್ಲೇ ಇದ್ದ ಡಾಕ್ಟರ್‌ ಹೇಳಿದ್ದಾರೆ.

ಗೌತಮ್‌ ಎರಡನೇ ಮದುವೆ ಪ್ರಸಂಗ ಹಸೆಮಣೆಯವರೆಗೆ ಬಂದಿತ್ತು. ಗೌತಮ್‌‌ ಮಧುರಾ ಪರಸ್ಪರ ಹಾರ ಕೂಡ ಬದಲಾಯಿಸಿಕೊಂಡಿದ್ದರು. ಆದರೆ ಕೊನೆಕ್ಷಣದಲ್ಲಿ ಗೌತಮ್‌ ಅಲ್ಲಿಂದ ಎದ್ದು ಭೂಮಿಕಾಳಿಗೆ ತಾಳಿ ಕಟ್ಟಿದ್ದರು. ಎಂದೆಂದಿಗೂ ಭೂಮಿಕಾಳೇ ನನ್ನ ಹೆಂಡತಿ ಎಂದು ಎಲ್ಲರ ಮುಂದೆ ಹೇಳಿದ್ದರು.

ಇದೇ ಸಮಯದಲ್ಲಿ ಗೌತಮ್‌ ಎರಡನೇ ಮದುವೆ ವಿಷಯದಲ್ಲಿ ಮಧುರಾ ಎಂಬ ಯುವತಿಗೆ ಅನ್ಯಾಯವಾಗುತ್ತಿದೆಯಲ್ವ ಎಂದು ಯೋಚಿಸುವವರಿಗೆ ಇಂದಿನ ಎಪಿಸೋಡ್‌ನಲ್ಲಿ ಉತ್ತರ ದೊರಕಲಿದೆ. ಏಕೆಂದರೆ, ಇದು ನಾನು ಮತ್ತು ಗೌತಮ್‌ ಸೇರಿ ಮಾಡಿರುವ ನಾಟಕ...