ಭಾರತ, ಮಾರ್ಚ್ 26 -- ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆ: ಭೂಮಿಕಾ, ಸುಧಾ, ಲಚ್ಚಿಯನ್ನು ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಬಂದ ಚಾಲಕ ವಾಪಸ್‌ ಹೊರಡಬೇಕೆಂದುಕೊಂಡಿದ್ದಾನೆ. ಆಗ ಲಚ್ಚಿ ತುಂಬಾ ಹೊಗಳುತ್ತಾಳೆ. ಈತ ಚೆನ್ನಾಗಿ ಓದಿರುವ ಕ್ಯಾಬ್‌ ಡ್ರೈವರ್‌ ಎಂದು ತಿಳಿಯುತ್ತದೆ. ಈತನ ಮಾತಿನಿಂದ ಭೂಮಿಕಾ ಕೂಡ ಇಂಪ್ರೆಸ್‌ ಆಗುತ್ತಾರೆ. ಈ ಸಮಯದಲ್ಲಿ ಲಚ್ಚಿ "ಅಂಕಲ್‌, ಕಾಫಿ ಕುಡಿದುಕೊಂಡು ಹೋಗಿ" ಎನ್ನುತ್ತಾಳೆ. "ಇಷ್ಟು ದಿನ ಯಾರೂ ನನ್ನ ಯಾರೂ ಕಾಫಿ ಕುಡಿದಿಲ್ಲ. ನಿಜವಾಗಿಯೂ ನೀನು ಗ್ರೇಟ್‌" ಎನ್ನುತ್ತಾನೆ. "ನೀವು ನಿಜಕ್ಕೂ ಗ್ರೇಟ್‌, ಮಗುವಿಗೆ ಸಂಸ್ಕಾರ, ಸಂಸ್ಕೃತಿಯನ್ನು ಅರೆದು ಕುಡಿಸಿದ್ದೀರಿ" ಎನ್ನುತ್ತಾನೆ. ಹೀಗಿದ್ದರೂ ಸುಧಾಳ ಮುಖದಲ್ಲಿ ನಗು ಮೂಡುವುದಿಲ್ಲ. ಭೂಮಿಕಾ ಕಾಫಿಗೆ ಆಹ್ವಾನಿಸುತ್ತಾರೆ. ಆತ ಮನೆಗೆ ಬರುತ್ತಾನೆ. "ಇಂತಹ ದೊಡ್ಡ ಮನೆ ನಮಗೆ ಕಟ್ಟಲು ಆಗುತ್ತಾ ಗೊತ್ತಿಲ್ಲ. ಒಳಗೆ ಬಂದು ಕಾಫಿ ಕುಡಿದಾದ್ರೂ ಹೋಗುತ್ತೇನೆ" ಎನ್ನುತ್ತಾನೆ. ಒಳಗೆ ಬಂದವ "ಒಳ್ಳೆ ಅರಮನೆ ತರಹ ಇದೆ" ಎನ್ನಬೇಡಿ. ಇಷ್ಟು ಒಳ್ಳೆ...