Bangalore, ಏಪ್ರಿಲ್ 10 -- Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಒಂದಿಷ್ಟು ಬೆಳವಣಿಗೆಗಳು ನಡೆದಿವೆ. ಮಲ್ಲಿ ಭೂಪತಿಗೆ ಬೈದದ್ದು, ಬೆದರಿಸಿದ್ದು ಗೌತಮ್‌ಗೆ ಇಷ್ಟವಾಗಲಿಲ್ಲ. "ಭೂಪತಿನ ಹೆದರಿಸು, ಬೆದರಿಸು ಅಂತ ನಿನಗೆ ಯಾರು ಹೇಳಿದ್ರು, ಅವರಿಗೆ ನಿನ್ನ ತಂದೆಯ ವಯಸ್ಸು, ಅವರ ಬಳಿ ಹೀಗೆಲ್ಲ ಮಾತನಾಡಬಾರದು" ಎಂದು ಗೌತಮ್‌ ಮಲ್ಲಿಗೆ ಬುದ್ದಿವಾದ ಹೇಳುತ್ತಾರೆ. ಭೂಪತಿಯ ಕತ್ತಿಗೆ ಕತ್ತಿ ಹಿಡಿದು ಮಲ್ಲಿ ಬೆದರಿಸಿದ್ದಳು. "ನಿಮ್ಮಿಬ್ಬರಿಗೆ ಅವರು ಮಾಡುವ ತೊಂದರೆ ನೋಡಲು ಆಗಲಿಲ್ಲ. ಅದಕ್ಕೆ ಹೋಗಿ ಬೈದೆ" ಎಂದು ಮಲ್ಲಿ ಹೇಳುತ್ತಾಳೆ. "ತಪ್ಪು ಮಾಡಿದ್ದು ಅವರು ತಾನೇ, ತಪ್ಪನ್ನು ಪ್ರಶ್ನಿಸಿದ್ದು ತಪ್ಪೇ" ಎಂದು ಮಲ್ಲಿ ಹೇಳುತ್ತಾಳೆ. "ಇದು ನೀನಲ್ಲ ಮಲ್ಲಿ. ನೀನು ಗಲಾಟೆ ಮಾಡೋದು ನನಗೆ ಇಷ್ಟವಾಗೋಲ್ಲ. ನೀನು ತಾತಾನ ಮೊಮ್ಮಗಳು. ಅವರಿಗೆ ಇದು ಗೊತ್ತಾದ್ರೆ ಬೇಸರವಾಗಬಹುದು. ಇನ್ಯಾವಾಗಲಾದ್ರು ಭೂಪತಿ ಸಿಕ್ರೆ ಅವರಲ್ಲಿ ಕ್ಷಮೆ ಕೇಳಬೇಕು" ಎಂದು ಗೌತಮ್‌ ಹೇಳುತ್ತಾರೆ. ಇದನ್...