ಭಾರತ, ಏಪ್ರಿಲ್ 4 -- ಅಮೃತಧಾರೆ ಧಾರಾವಾಹಿ: ವೈದ್ಯರು ಭಾಗ್ಯಮ್ಮನ ಚೆಕ್‌ ಮಾಡಿದ್ದಾರೆ. ಆಕೆಗೆ ಔಷಧ ಓವರ್‌ಡೋಸ್‌ ಆಗಿರುವುದು ತಿಳಿಯುತ್ತದೆ. ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಗೌತಮ್‌ಗೆ ಹೇಳುತ್ತಾರೆ. ಭಾಗ್ಯಮ್ಮನಿಗೆ ನೀಡಲು ಬೇರೆ ಔಷಧ ನೀಡುತ್ತಾರೆ. ವೈದ್ಯರು ಹೋಗುತ್ತಾರೆ. ಭೂಮಿಕಾ ಭಾಗ್ಯಮ್ಮನನ್ನು ಕಾಳಜಿಯಿಂದ ಮಾತನಾಡಿಸುತ್ತಾರೆ. ಇದನ್ನು ನೋಡಿ ಅಪೇಕ್ಷಾ "ಚೆನ್ನಾಗಿ ಡ್ರಾಮಾ ಮಾಡ್ತಾಳೆ. ನಾನು ಕೂಡ ಇದೇ ರೀತಿ ಡ್ರಾಮಾ ಮಾಡ್ತಾಳೆ" ಎಂದುಕೊಳ್ಳುತ್ತಾಳೆ. ಇನ್ನೊಂದೆಡೆ ಶಕುಂತಲಾದೇವಿ ಖುಷಿಯಲ್ಲಿದ್ದಾರೆ. ಡಾಕ್ಟರ್‌ಗೆ ಮಾತ್ರೆಯ ವಿಷಯ ಗೊತ್ತಾಗಲಿಲ್ಲ ಎನ್ನುತ್ತಾರೆ. ಆಗ ಲಕ್ಕಿ ಲಕ್ಷಿಕಾಂತ್‌ "ಡಾಕ್ಟರ್‌ ಬರುವ ಮೊದಲೇ ಒರಿಜಿನಲ್‌ ಮಾತ್ರೆಗಳನ್ನು ಅಲ್ಲಿ ಇಟ್ಟಿದ್ದೆ" ಎಂದು ಲಕ್ಷ್ಮಿಕಾಂತ್‌ ಹೇಳುತ್ತಾನೆ. ಶಕುಂತಲಾದೇವಿ ಖುಷಿಯಾಗುತ್ತಾರೆ.

"ಭೂಮಿಕಾ ಎಲ್ಲೋ ಹೊರಗೆ ಹೋಗಿದ್ದಾಳೆ. ಮಲ್ಲಿ ಬೇರೆ ಅವಳ ಜತೆಗಿದ್ದಾಳೆ. ನಮಗೆ ಗೊತ್ತಿಲ್ಲದೆ ಏನೋ ನಡೆಯುತ್ತ ಇದೆ. ಹೋಗುವಾಗ ಇಬ್ಬರೂ ಹೋಗಿದ್ದಾರೆ. ಬರುವಾಗ ಮಲ್ಲಿ...