ಭಾರತ, ಮಾರ್ಚ್ 14 -- Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯಲ್ಲಿ ನಿನ್ನೆಯ ಸಂಚಿಕೆಯಲ್ಲಿ ಮೂರು ಪ್ರಮುಖ ಬೆಳವಣಿಗೆಗಳು ಆಗಿವೆ. ಒಂದು ಗೌತಮ್‌ ಮತ್ತು ಭೂಮಿಕಾ ಮತ್ತೆ ಒಂದಾಗಿರುವುದು, ಇನ್ನೊಂದು ಭೂಮಿಕಾ ಗರ್ಭಿಣಿ ಎಂದು ತಿಳಿದುಬಂದಿರುವುದು. ಮೂರನೆಯ ಬೆಳವಣಿಗೆ ಶತ್ರುಗಳ ಮುಖಭಂಗ. ಈ ಮೂರನೇ ಬೆಳವಣಿಗೆ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ.

ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಶತ್ರುಗಳಿಗೆ ಮುಖಭಂಗವಾಗಿದೆ. ಹೌದು, ಗೌತಮ್‌ ದಿವಾನ್‌ಗೆ ಇನ್ನೊಂದು ಮದುವೆ ಮಾಡಿಸುವ, ಭೂಮಿಕಾಳನ್ನು ಮನೆಯಿಂದ ಓಡಿಸುವ, ಜೈದೇವ್‌ನನ್ನು ಎಂಡಿ ಮಾಡುವ, ಅಪಾರ ಆಸ್ತಿಗೆ ತಾನೇ ರಾಣಿಯಾಗುವ ಶಕುಂತಲಾದೇವಿ ಯೋಜನೆಗಳೆಲ್ಲವೂ ಠುಸ್‌ ಆಗಿವೆ. ಈಗ ಅವರ ಸ್ಥಿತಿ ಯಾರಿಗೂ ಹೇಳುವಂತೆಯೂ ಇಲ್ಲ. ಸದ್ಯ ರೋಷದಿಂದ ಬುಸುಗುಡುವುದಷ್ಟೇ ಅವರ ಕೆಲಸ.

ಅಮೃತಧಾರೆ ಧಾರಾವಾಹಿಯಲ್ಲಿ ನಿನ್ನೆಯ ಸಂಚಿಕೆಯಲ್ಲಿ ಮೂರು ಪ್ರಮುಖ ಬೆಳವಣಿಗೆಗಳು ಆಗಿವೆ. ಒಂದು ಗೌತಮ್‌ ಮತ್ತು ಭೂಮಿಕಾ ಮತ್ತೆ ಒಂದಾಗಿರುವುದು, ಇನ್ನೊಂದು ...