Bangalore, ಮಾರ್ಚ್ 8 -- Amruthadhaare: ಕನ್ನಡ ಕಿರುತೆರೆ ಧಾರಾವಾಹಿಗಳಿಗೆ ದೊಡ್ಡಮಟ್ಟದ ಪ್ರೇಕ್ಷಕ ಬಳಗ ಇರುತ್ತದೆ. ಸೀರಿಯಲ್‌ನಲ್ಲಿ ಕಾಣಿಸುವ ಪಾತ್ರದಾರಿಗಳು ಸಮಾಜದ ಮೇಲೆ ಪರಿಣಾಮವನ್ನೂ ಬೀರಬಹುದು. ಕೆಲವೊಮ್ಮೆ ಸೀರಿಯಲ್‌ನಲ್ಲಿರುವ ಕ್ಯಾರೆಕ್ಟರ್‌ಗಳಂತಹ ವ್ಯಕ್ತಿತ್ವಗಳನ್ನು ನಾವು ನಮ್ಮ ಸುತ್ತಮುತ್ತ ನೋಡಬಹುದು. ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆ ಧಾರಾವಾಹಿಯ ಭೂಮಿಕಾ, ಶಕುಂತಲಾದೇವಿ, ಮಹಿಮಾ,ಅಪೇಕ್ಷಾ, ಭಾಗ್ಯಮ್ಮ, ಮಹಿಮಾ, ಅಪರ್ಣಾ ಸೇರಿದಂತೆ ವಿವಿಧ ಪಾತ್ರದಾರಿಗಳ ಗುಣಲಕ್ಷಣಗಳನ್ನು ನೆನಪಿಸಿಕೊಳ್ಳೋಣ.

ಭೂಮಿಕಾ: ಗೌತಮ್‌ ದಿವಾನ್‌ ಪತ್ನಿಯಾಗಿ ಭೂಮಿಕಾ ಗಟ್ಟಿ ಹೆಣ್ಣುಮಗಳಾಗಿ ಖ್ಯಾತಿ ಪಡೆದಿದ್ದಾರೆ. ಛಾಯಾ ಸಿಂಗ್‌ ಈ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ. ಇತ್ತೀಚಿನ ಕೆಲವು ಕಣ್ಣೀರಧಾರೆ ಎಪಿಸೋಡ್‌ಗಳನ್ನು ಹೊರತುಪಡಿಸಿ ನೋಡಿದರೆ ಭೂಮಿಕಾ ಎಲ್ಲಾ ಮಹಿಳೆಯರಿಗೂ ಸ್ಪೂರ್ತಿದಾಯಕ ಪಾತ್ರ. ಈಕೆಯ ಆಲೋಚನೆಗಳು, ಚಿಂತನೆಗಳು ಬಲುಸುಂದರ. ಹೀಗಾಗಿ, ಕಿರುತೆರೆ ಪ್ರೇಕ...