America, ಜನವರಿ 30 -- ವಾಷಿಂಗ್ಟನ್: ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿದಂತೆ 64 ಜನರಿದ್ದ ಅಮೆರಿಕನ್ ಏರ್‌ಲೈನ್ಸ್‌ನ ಪ್ರಾದೇಶಿಕ ಜೆಟ್ ವಿಮಾನವು ವಾಷಿಂಗ್ಟನ್‌ನ ಶ್ವೇತಭವನದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ನದಿಗೆ ಉರುಳಿ ಬಿದ್ದ ಪರಿಣಾಮ ಹಲವಾರು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ವಿಮಾನ ಮತ್ತು ಹೆಲಿಕಾಪ್ಟರ್ ವಾಷಿಂಗ್ಟನ್‌ನ ಪೊಟೋಮ್ಯಾಕ್ ನದಿಗೆ ಅಪ್ಪಳಿಸುತ್ತಿದ್ದಂತೆ ರಾತ್ರಿ ವೇಳೆ ಆಕಾಶದಲ್ಲಿ ಬೃಹತ್ ಪಟಾಕಿ ಸಿಡಿಸಿದಂತೆ ಕಾಣುತ್ತಿತ್ತು. ರಕ್ಷಣಾ ಕಾರ್ಯಗಳು ಬುಧವಾರ ರಾತ್ರಿಯಿಂದಲೇ ಮುಂದುವರಿದಿದೆ. ಅಗ್ನಿಶಾಮಕ ದೋಣಿಗಳು, ಟ್ರಕ್‌ಗಳನ್ನು ನಿಯೋಜಿಸಲಾಗಿದ್ದು, ನದಿಗೆ ಬಿದ್ದವರ ಹುಡುಕಾಟ ನಡೆದಿದೆ. ಸಾವಿನ ಸಂಖ್ಯೆ, ಗಾಯಾಳುಗಳ ಪ್ರಮಾಣ ಇನ್ನಷ್ಟೇ ಖಚಿತವಾಗಬೇಕಿದೆ ಎಂದು ಅಮೆರಿಕಾದ ಉನ್ನತ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.

ಅಮೆರಿಕನ್ ಈಗಲ್ ಫ್ಲೈಟ್ 5342 ಕಾನ್ಸಾಸ್‌ನಿಂದ ವಾಷಿಂಗ್ಟನ್ ಡಿಸಿಗೆ 60 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಗಳೊಂದ...