Bengaluru, ಏಪ್ರಿಲ್ 8 -- ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಪ್ರತಿ ವರ್ಷದ ಏಪ್ರಿಲ್ 14ರಂದು, ದೇಶದಾದ್ಯಂತ ಆಚರಿಸಲಾಗುತ್ತದೆ. ಅಂಬೇಡ್ಕರ್ ಅವರು ಭಾರತ ಸಂವಿಧಾನದ ಶಿಲ್ಪಿಯಾಗಿದ್ದಷ್ಟೇ ಅಲ್ಲದೆ, ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ಚಿಂತಕರು. ಈ ಸಂದರ್ಭದಲ್ಲಿ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಯಲ್ಲಿ ಅಂಬೇಡ್ಕರ್ ಅವರ ಸಾಧನೆಗಳು ಹಾಗೂ ತತ್ವಗಳ ಬಗ್ಗೆ ಭಾಷಣಗಳನ್ನು ನಡೆಸುವುದು ಸಾಮಾನ್ಯ. ಈ ಲೇಖನದಲ್ಲಿಎಲ್ಲರಿಗೂ ಉಪಯುಕ್ತವಾಗುವಂತೆ ಕೆಲವೊಂದು ಚಿಕ್ಕದಾದ ಸರಳ ಭಾಷಣ ಮಾದರಿಗಳನ್ನು ನೀಡಲಾಗಿದೆ. ಇವು ಅವರನ್ನು ಗೌರವಿಸುವ ಜೊತೆಗೆ, ಅವರ ವಿಚಾರಧಾರೆಯನ್ನು ಪೋಷಿಸುವ ಉದ್ದೇಶವನ್ನೂ ಹೊಂದಿವೆ.

ಇಂದು ನಾವು ಭಾರತ ದೇಶಕ್ಕೆ ಸಂವಿಧಾನ ನೀಡಿದ ಮಹಾನ್ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಅವರು ಕೇವಲ ರಾಜಕೀಯ ನಾಯಕನಷ್ಟೇ ಅಲ್ಲ, ಸಮಾಜ ಸುಧಾರಕ, ಜ್ಞಾನಿ, ಮತ್ತು ನ್ಯಾಯದ ಧ್ವಜಧಾರಿ ಕೂಡಾ ಆಗಿದ್ದರು. ...