ಭಾರತ, ಮಾರ್ಚ್ 17 -- ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಖುಷಿ ವಿಚಾರ ಇಲ್ಲಿದೆ. ಅಲ್ಲು ಅರ್ಜುನ್ ಅವರ ಮುಂಬರುವ ಸಮಯದಲ್ಲಿ. ಸುಕುಮಾರ್ ಅವರ ಪುಷ್ಪ ಸರಣಿ ಸಿನಿಮಾಗಳು ಯಶಸ್ವಿಯಾಗಿ ಪ್ರಾರಂಭವಾಗುವ ಮೊದಲು ಅಲ್ಲು ಅರ್ಜುನ್ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಈಗ ಮತ್ತೆ ಅಲ್ಲು ಅರ್ಜುನ್ ಆ ಸಿನಿಮಾಗಳ ಬಗ್ಗೆ ಗಮನಕೊಡಲಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ. ಅಲ್ಲು ಅರ್ಜುನ್ ಅಭಿಮಾನಿಗಳು ಸಹ ಮುಂದೆ ಯಾವೆಲ್ಲ ಸಿನಿಮಾ ಮಾಡಲಿದ್ದಾರೆ ಎಂಬ ಕಾತರತೆ ಹೊಂದಿದ್ದಾರೆ. ನಿರ್ಮಾಪಕ ರವಿಶಂಕರ್ ರಾಬಿನ್‌ಹುಡ್ ಸಿನಿಮಾ ಪ್ರಚಾರ ಮಾಡುವಾಗ ಅಲ್ಲು ಅರ್ಜಿನ್ ಅವರ ಮುಂಬರುವ ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ.

ಅಲ್ಲು ಅರ್ಜುನ್ ಅವರು ಒಪ್ಪಿಕೊಂಡ ಸಿನಿಮಾಗಳ ಚಿತ್ರೀಕರಣ ಆರಂಭಿಸಿದ್ದಾರೆ. ಪುಷ್ಪ ಸಿನಿಮಾ ಬಿಗ್ ಹಿಟ್‌ ಆದಾಗಿನಿಂದ ಪುಷ್ಪ ಸಿನಿಮಾದ ಸರಣಿಗಳನ್ನೇ ಸಿನಿಪ್ರಿಯರು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಆ ಕಾರಣಕ್ಕೆ ಪುಷ್ಪ 3 ಸಿನಿಮಾ ಬರಬಹುದಾ? ಎಂಬ ನಿರೀಕ್ಷೆಯೂ ಸಹಜವಾಗಿ ಇದ್ದೇ ಇರುತ್ತದೆ. ಪುಷ್ಪ 2:...