ಭಾರತ, ಮಾರ್ಚ್ 4 -- Aishwarya Rangarajan Songs: ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕಿ ಐಶ್ವರ್ಯಾ ರಂಗರಾಜನ್‌ ಸೋಷಿಯಲ್‌ ಮೀಡಿಯಾದಲ್ಲಿ ತನ್ನ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಗಾಯಕಿ ಐಶ್ವರ್ಯಾ ರಂಗರಾಜನ್‌ ಎಂದಾಗ ನಿಮಗೆ ಹಲವು ಹಾಡುಗಳು ನೆನಪಿಗೆ ಬರಬಹುದು. ಇವರು ಶೇಕ್‌ ಇಟ್‌ ಪುಷ್ಪವತಿ ಎಂಬ ಹಾಡಿನ ಮೂಲಕ ಫೇಮಸ್‌. ಐಶ್ವರ್ಯಾ ರಂಗರಾಜನ್‌ ಅವರು ಸರಿಗಮಪ ಸೀಸನ್‌ 11ರ ಸ್ಪರ್ಧಿಯಾಗಿದ್ದರು. ಈಗ ಇವರು ಕನ್ನಡದ ಬಹುಬೇಡಿಕೆಯ ಗಾಯಕಿ.

ಕಳೆದ ವರ್ಷ ಉಪೇಂದ್ರ ನಟನೆ ಮತ್ತು ನಿರ್ದೇಶನದ ಯುಐ ಸಿನಿಮಾದ ಟ್ರೋಲ್‌ ಸಾಂಗ್‌ಗೂ ಧ್ವನಿಯಾಗಿದ್ದರು. ಕೆಜಿಎಫ್‌ 2 ಸಿನಿಮಾದ ತೂಫನ್‌ ಹಾಡಿಗೂ ಧ್ವನಿಯಾಗಿದ್ದರು. ಐಶ್ವರ್ಯಾ ರಂಗರಾಜನ್‌ ಹಾಡುಗಳ ಲಿಸ್ಟ್‌: ಐಶ್ವರ್ಯಾ ರಂಗರಾಜನ್‌ ಅವರ ಕೆಲವು ಜನಪ್ರಿಯ ಗೀತೆಗಳ ವಿವರ ಇಲ್ಲಿದೆ. ಕೆಜಿಎಫ್‌ ಚಾಪ್ಟರ್‌2 ನ ತೂಫನ್‌ ಹಾಡು, ಕ್ರಾಂತಿ ಸಿನಿಮಾದ ಶೇಕ್‌ ಇಟ್‌ ಪುಷ್ಪವತಿ, ಘೋಸ್ಟ್‌ ಸಿನಿಮಾದ ಒಜಿಎಂ, ಯುಐ ಸಿನಿಮಾದ ಟ್ರೋಲ್‌ ಸಾಂಗ್‌, ಏಕ್‌ ಲವ್‌ ಯ ಸಿನಿಮಾದ ಮೀಟ್‌ ಮಾಡ...