ಭಾರತ, ಮಾರ್ಚ್ 4 -- Aishwarya Rangarajan: ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕಿಯಾಗಿರುವ ಐಶ್ವರ್ಯಾ ರಂಗರಾಜನ್‌ ಸೋಷಿಯಲ್‌ ಮೀಡಿಯಾದಲ್ಲಿ ತನ್ನ ಎಂಗೇಜ್‌ಮೆಂಟ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಇವರು ಕನ್ನಡದ ಟಾಪ್‌ ಲಿಸ್ಟ್‌ನಲ್ಲಿರುವ ಗಾಯಕಿ. ಕೆಜಿಎಫ್‌ ಸೇರಿದಂತೆ ಹಲವು ಸಿನಿಮಾಗಳಿಗೆ ಧ್ವನಿಯಾಗಿದ್ದಾರೆ. ಶೇಕ್‌ ಇಟ್‌ ಪುಷ್ಪವತಿ ಹಾಡಿನ ಮೂಲಕ ಖ್ಯಾತಿ ಪಡೆದಿದ್ದಾರೆ.

ಐಶ್ವರ್ಯಾ ರಂಗರಾಜನ್‌ ತನ್ನ ಎಂಗೇಜ್‌ಮೆಂಟ್‌ ಫೋಟೋಗಳಿಗೆ "ಬೆಂಗಳೂರು ಹುಡುಗಿ, ಮಂಗಳೂರು ಹುಡುಗ" ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಐಶ್ವರ್ಯಾ ರಂಗರಾಜನ್‌ ಅವರು ಸರಿಗಮಪ ಸೀಸನ್‌ 11ರ ಸ್ಪರ್ಧಿಯಾಗಿದ್ದರು. ಈಗ ಇವರು ಕನ್ನಡದ ಬಹುಬೇಡಿಕೆಯ ಗಾಯಕಿ.

ಇದೇ ಭಾನುವಾರ ಐಶ್ವರ್ಯಾ ರಂಗರಾಜನ್‌ ಎಂಗೇಜ್‌ಮೆಂಟ್‌ ಆಗಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ನವಜೋಡಿಗೆ ಎಲ್ಲರೂ ಶುಭ ಹಾರೈಸಿದ್ದಾರೆ. ಕುಡ್ಲದ ಮರ್ಮಲ್‌ ಆದ್ರಿ (ಮಂಗಳೂರು ಸೊಸೆ) ಎಂದ ಆ್ಯಂಕರ್ ಅನುಶ್ರಿ ಕಾಮೆಂಟ್‌ ಮಾಡಿದ್ದಾರೆ.

ಸ...