ಭಾರತ, ಮಾರ್ಚ್ 27 -- Aishwarya Rai Bachchan car accident: ಮುಂಬೈನ ಜುಹು ಉಪನಗರದಲ್ಲಿ ಬುಧವಾರ ಬೃಹನ್ ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್) ಸಂಸ್ಥೆಯ ಬಸ್‌ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಐಷಾರಾಮಿ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವರದಿಗಳ ಪ್ರಕಾರ ಈ ಅಪಘಾತವಾದ ಬಳಿಕ ನಟಿ ಐಶ್ವರ್ಯಾ ರೈ ಅವರ ಬೌನ್ಸರ್‌ ಕೋಪಗೊಂಡು ಬಸ್‌ ಚಾಲಕನ ಕೆನ್ನೆಗೆ ಹೊಡೆದಿದ್ದಾನೆ ಎನ್ನಲಾಗಿದೆ. ಬಳಿಕ ಬಸ್‌ ಚಾಲಕ ಪೊಲೀಸರಿಗೆ ಕರೆ ಮಾಡಿದ್ದಾನೆ. ಅಮಿತಾಬ್‌ ಬಚ್ಚನ್‌ ಮನೆಯ ಮೇಲ್ವಿಚಾರಕರು ಬಳಿಕ ಬೌನ್ಸರ್‌ ವರ್ತನೆಗೆ ಕ್ಷಮೆ ಯಾಚಿಸಿದ್ದಾರೆ. ಹೀಗಾಗಿ, ಬಸ್‌ ಚಾಲಕ ಕೇಸ್‌ ನೀಡದೆ ಪ್ರಕರಣವನ್ನು ಅಲ್ಲಿಗೆ ಬಿಟ್ಟಿದ್ದಾನೆ ಎಂದು ವರದಿಗಳು ತಿಳಿಸಿವೆ.

ಐಶ್ವರ್ಯ ರೈ ಅವರ ದುಬಾರಿ ಕಾರು ಮತ್ತು ಬೆಸ್ಟ್‌ ಬಸ್‌ ನಡುವಿನ ಅಪಘಾತದ ಹಲವು ಚಿತ್ರಗಳು, ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಅಮಿತಾಬ್‌‌ ಬಚ್ಚನ್‌ ಅವರ ಬಂಗ...