ಭಾರತ, ಮಾರ್ಚ್ 19 -- ಕರ್ನಾಟಕದ ಕರಾವಳಿ ಮೂಲದ ಬಾಲಿವುಡ್‌ ನಟಿ ಐಶ್ವರ್ಯಾ ರೈ ಅವರು ತನ್ನ ತಂದೆ ಕೃಷ್ಣರಾಜ್‌ ರೈ ಅವರ 8ನೇ ವರ್ಷದ ಪುಣ್ಯತಿಥಿಯ ನೆನಪಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತನ್ನ ತಂದೆಯ ಭಾವಚಿತ್ರಕ್ಕೆ ಐಶ್ವರ್ಯಾ ರೈ ನಮನಗಳನ್ನು ಸಲ್ಲಿಸಿದ್ದಾರೆ. ಇದೇ ಸಮಯದಲ್ಲಿ ತನ್ನ ಅಜ್ಜನ ಫೋಟೋಗೆ ಆರಾಧ್ಯ ಬಚ್ಚನ್‌ ಕೂಡ ನಮಸ್ಕರಿಸಿದ್ದಾರೆ. ಐಶ್ವರ್ಯಾ ಅವರು ತನ್ನ ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ದಿವಂಗತ ಕೃಷ್ಣರಾಜ್‌ ರೈ ಅವರ ಫೋಟೋವನ್ನು ನಟಿ ಮೊದಲು ಹಂಚಿಕೊಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಅಜ್ಜನ ಫೋಟೋದ ಮುಂದೆ ಆರಾಧ್ಯ ಬಚ್ಚನ್‌ ಇದ್ದಾರೆ. ಇನ್ನೊಂದು ಫೋಟೋದಲ್ಲಿ ಐಶ್ವರ್ಯಾ ರೈ ಇದ್ದಾರೆ. ಫೋಟೋಗೆ ತಮ್ಮ ಶಿರವನ್ನು ತಾಗಿಸಿ ಗೌರವ ಸೂಚಿಸಿದ್ದಾರೆ. ಆರಾಧ್ಯ ಬಚ್ಚನ್‌ ಅವರು ಬಿಳಿ ಉಡುಗೆಯಲ್ಲಿದ್ದಾರೆ.

ಈ ಫೋಟೋಗಳಿಗೆ ಐಶ್ವರ್ಯಾ ರೈ ಹೀಗೆ ಬರೆದಿದ್ದಾರೆ. ತನ್ನ ಫೋಟೋ ಇರುವ ಫೋಟೋಗೆ ಐಶ್ವರ್ಯಾ ರೈ "ನಮಸ್ಕಾರ"ದ ಇಮೋಜಿ ಹಾಕಿದ್ದಾರೆ. ನನ್ನ ಪ್ರೀತಿಯ ಡ್ಯಾಡಿ/ಅಜ್ಜನಿಗೆ ಪ್ರೀತಿ ಎಂ...