ಭಾರತ, ಫೆಬ್ರವರಿ 10 -- Air Show 2025: ಬಾನೆತ್ತರಕ್ಕೆ ಹಾರುವ ಲೋಹದ ಹಕ್ಕಿಗಳನ್ನು ನೋಡಲು ಸಾಕಷ್ಟು ಜನ ಕಾತರದಿಂದ ಕಾಯುತ್ತಿರುವ ಸಮಯ ಇದು. ಉದ್ಯಾನ ನಗರಿ ಬೆಂಗಳೂರಿನ ವಾಯುಪಡೆ ನಿಲ್ದಾಣ ಯಲಹಂಕದಲ್ಲಿ ನಡೆಯುವ ವೈಮಾನಿಕ ಪ್ರದರ್ಶನ ಭಾರತದ ಪ್ರಜೆಗಳಿಗೊಂದು ಹೆಮ್ಮೆ. ವೈಮಾನಿಕ ಪ್ರದರ್ಶನಕ್ಕೆ ಹೋಗುತ್ತಿದ್ದಂತೆ, ಬೆಂಗಳೂರು ಬಿಟ್ಟು ಬೇರೆಯಾವುದೋ ಹಳ್ಳಿಗೆ ಹೋದ ಅನುಭವ ಆಗುತ್ತದೆ. ಅಲ್ಲಿನ ವಾತಾವರಣವನ್ನು ನೋಡುತ್ತಿದ್ದಂತೆ, ಯಾವಾಗ ವಿಮಾನಗಳ ಹಾರಾಟ ಆರಂಭವಾಗುತ್ತದೆ ಎಂದು ಇನ್ನಷ್ಟು ತವಕ ಹುಟ್ಟುತ್ತದೆ. ಇನ್ನು ವಿಮಾಗಳು ಹಾರಾಟ ಆರಂಭಿಸುವ ಹೊತ್ತಿಗಂತೂ ಎದೆಯಲ್ಲಿ ನಡುಕ ಹುಟ್ಟುತ್ತದೆ. ಯಾಕೆಂದರೆ ಹತ್ತಿರದಿಂದ ಅವುಗಳ ಶಬ್ಧ ಅಷ್ಟು ದೊಡ್ಡದಾಗಿ ಕೇಳುತ್ತದೆ.

ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ಕಂಡು ಇವುಗಳೇನಾದರೂ ವಿಮಾನಕ್ಕೆ ತಗುಲಿದರೆ ಎಂಬ ಅನುಮಾನ ಮೂಡುತ್ತದೆ. ಮಾಂಸ ಮಾರಾಟವನ್ನು ನಿಷೇಧ ಮಾಡಿ ಹಕ್ಕಿಗಳು ಹಾರಾಡದಂತೆ ನಿಗಾ ವಹಿಸಿದರೂ ಸಹ ಅಲ್ಲೊಂದು, ಇಲ್ಲೊಂದು ಹಕ್ಕಿಗಳು ಆಕಾಶದಲ್ಲಿ ಹಾರಾಡುವುದು ಕಾಣಿಸುತ್ತ...