Bengaluru, ಮಾರ್ಚ್ 11 -- ಬಿರು ಬಿಸಿಲಿನ ದಿನಗಳು ಆರಂಭವಾಗಿವೆ. ಹೀಗಾಗಿ ಸೆಕೆ ಎದುರಿಸಲು ನಾವು ಮನೆಯಲ್ಲಿ ಎಸಿ, ಕೂಲರ್ ಮತ್ತು ಫ್ಯಾನ್ ಮೊರೆಹೋಗುವುದು ಸಾಮಾನ್ಯ ಸಂಗತಿ. ಆದರೆ ಅವುಗಳನ್ನು ಮನೆಯಲ್ಲಿ ತಂದಿರಿಸಿದ ಬಳಿಕ ಕಾಲಕಾಲಕ್ಕೆ ಕ್ಲೀನ್ ಮಾಡುವುದು ಮತ್ತು ನಿರ್ವಹಣೆ ಮಾಡುವುದು ಅಗತ್ಯ. ಅದರಿಂದ ಆರೋಗ್ಯಕ್ಕೂ ಒಳ್ಳೆಯದು. ಸೂಕ್ತ ಕಾರ್ಯಕ್ಷಮತೆ, ನೈರ್ಮಲ್ಯ ಮತ್ತು ಹೆಚ್ಚು ಕಾಲ ಬಾಳಿಕೆ ಪಡೆಯಲು ನಿಮ್ಮ ಹೋಮ್ ಕೂಲರ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಅತ್ಯಗತ್ಯ. ನೀವು ಮನೆಯ ಕೋಣೆಗಳಿಗೆ ಏರ್ ಕೂಲರ್ ಅಥವಾ ಕುಡಿಯಲು ವಾಟರ್ ಕೂಲರ್ ಹೊಂದಿದ್ದರೂ ಅದರಲ್ಲಿ ಧೂಳು, ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮ ಕಣಗಳು ಸೇರ್ಪಡೆಯಾಗಿ ದಕ್ಷತೆಯನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ. ಹೀಗಾಗಿ ಕೂಲರ್ ನಿರ್ವಹಣೆ ಬಗ್ಗೆ ಎಚ್ಚರಿಕೆ ವಹಿಸಬೇಕು.

ಉತ್ತಮ ಕಾರ್ಯಕ್ಷಮತೆಗಾಗಿ ನಿಮ್ಮ ಹೋಮ್ ಕೂಲರ್ ಅನ್ನು ಹೇಗೆ ಸ್ವಚ್ಛಗೊಳಿಸುವುದು ಮತ್ತು ನಿರ್ವಹಿಸುವುದು ಎಂಬ ಬಗ್ಗೆ ಇಲ್ಲಿ ವಿವರವಾದ ಮಾಹಿತಿ ...