Bengaluru, ಫೆಬ್ರವರಿ 21 -- ಮನೆಗೆ ಕೂಲರ್ ಖರೀದಿಸಬೇಕು ಎಂದು ಸಾಮಾನ್ಯವಾಗಿ ಪ್ರತಿ ಬಾರಿ ಸೆಕೆಗಾಲ ಆರಂಭವಾದಾಗ ಜನರು ಅಂದುಕೊಳ್ಳುತ್ತಾರೆ. ಕೂಲರ್ ಖರೀದಿಸುವುದು ಸುಲಭ ಮತ್ತು ಕಡಿಮೆ ವೆಚ್ಚದಾಯಕ. ಎಸಿಗೆ ಹೋಲಿಸಿದರೆ ಕೂಲರ್‌ನಲ್ಲಿ ಹಲವು ಪ್ರಯೋಜನಗಳಿವೆ, ಜತೆಗೆ ದರವೂ ಕಡಿಮೆ. ಹೀಗಾಗಿ ಮಧ್ಯಮ ವರ್ಗದ ಜನರ ಕೈಗೆ ಸುಲಭದಲ್ಲಿ ಕೂಲರ್ ಲಭ್ಯವಾಗುವ ರೀತಿಯಲ್ಲಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮಾದರಿಗಳು ಇಂದು ಲಭ್ಯವಿದೆ. ಕೂಲರ್ ಖರೀದಿಸುವಾಗ ಹಲವು ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ. ಕೆಲವೊಂದು ಕೂಲರ್‌ಗಳು ಕಡಿಮೆ ಶಬ್ದ ಮಾಡಿದರೆ, ಇನ್ನು ಕೆಲವು ಮಾದರಿಗಳು ಅಧಿಕ ಶಬ್ದ ಮಾಡುತ್ತವೆ. ಅದರಲ್ಲೂ ನಮ್ಮ ಅಗತ್ಯತೆ, ವಿನ್ಯಾಸ ಮತ್ತು ಬೆಲೆ, ಇಂಧನ ಕ್ಷಮತೆಯನ್ನು ಕೂಡ ನೋಡಿ ಖರೀದಿಸಬೇಕು, ಹಾಗೆಯೇ ಮಾರಾಟ ನಂತರದ ರಿಪೇರಿ ಮತ್ತು ಸೇವೆಗಳನ್ನು ಕೂಡ ಗಮನಿಸಬೇಕು. ಉಳಿದಂತೆ, ಬೆಲೆ ವ್ಯತ್ಯಾಸವನ್ನು ಕೂಡ ನೋಡಿಕೊಂಡರೆ ಒಳಿತು.

ಕೂಲರ್‌ನಲ್ಲಿ ಹಲವು ವಿಧಗಳಿವೆ, ಪರ್ಸನಲ್ ಕೂಲರ್, ಡೆಸರ್ಟ್ ಕೂಲರ್, ಟವರ್ ಕೂಲರ್ ಮತ್ತ...