ಭಾರತ, ಮೇ 14 -- ಬೆಂಗಳೂರು: ಭಾರತದ ಮೊದಲ AI ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕನ್ನಡದ 'ಲವ್ ಯೂ' ಚಿತ್ರವು ಮೇ 16ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ನಂತರ ಇದೇ ತಂಡವು ಮಾಗಡಿ ಕೆಂಪೇಗೌಡರ ಕುರಿತು ಹೊಸದೊಂದು ಚಿತ್ರ ಮಾಡುವುದಕ್ಕೆ ತಯಾರಿ ನಡೆಸಿದ್ದು, ಆದಷ್ಟು ಬೇಗ ಆ ಚಿತ್ರ ಹೊರಬರಲಿದೆಯಂತೆ.
ಇತ್ತೀಚೆಗೆ 'ಲವ್ ಯು' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರವನ್ನು AIನಲ್ಲಿ ಸೃಷ್ಟಿಸಿರುವ ನೂತನ್, 'ಚಿತ್ರದಲ್ಲಿ ಸಾಕಷ್ಟು ನ್ಯೂನತೆಗಳಿರಬಹುದು. ಕಾರಣ ಆರು ತಿಂಗಳ ಹಿಂದೆ ನಾವು ಈ ಚಿತ್ರ ಮಾಡಿದಾಗ, ಹೆಚ್ಚು ಸೌಲಭ್ಯಗಳಿರಲಿಲ್ಲ. ಈಗ ಸಾಕಷ್ಟು ಬೆಳವಣಿಗೆಗಳಾಗಿದ್ದು, ಮುಂದಿನ ದಿನಗಳಲ್ಲಿ AI ತಂತ್ರಜ್ಞಾನದಲ್ಲಿ ಇನ್ನಷ್ಟು ಅದ್ಭುತ ಪ್ರಯತ್ನಗಳನ್ನು ಮಾಡಬಹುದು. ಇಡೀ ದೇಶದಲ್ಲಿ ಕನ್ನಡದಲ್ಲಿ ಮೊದಲು ಇಂಥದ್ದೊಂದು ಪ್ರಯತ್ನವಾಗಲೀ ಎಂಬ ಕಾರಣಕ್ಕೆ ನಾವು ಚಿತ್ರ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಕೆಂಪೇಗೌಡರ ಕುರಿತು ಒಂದು ಸಿನಿಮಾ ಮಾಡುತ್ತಿದ್ದೇವೆ' ಎಂದರು....
Click here to read full article from source
To read the full article or to get the complete feed from this publication, please
Contact Us.