Bangalore, ಜನವರಿ 31 -- Agniveer vayu intake sports 02/2025: ಭಾರತೀಯ ವಾಯುಪಡೆಯ ವಾಯುಪಡೆ ಕ್ರೀಡಾ ನಿಯಂತ್ರಣ ಮಂಡಳಿಯು ಕ್ರೀಡಾಪಟುಗಳ ನೇಮಕಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇಂಟೇಕ್‌ 02/2025ರಲ್ಲಿ ಅಗ್ನಿವೀರವಾಯು ಸ್ಪೋರ್ಟ್ಸ್‌ ಹುದ್ದೆಯ ಮೂಲಕ ವಾಯುಪಡೆ ಸೇರಿಕೊಳ್ಳಲು ಅವಿವಾಹಿತ ಪುರುಷ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಕ್ರೀಡಾಪಟುಗಳು ಫೆಬ್ರವರಿ 13ರಿಂದ ಫೆಬ್ರವರಿ 22, 2025 ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ agnipathvayu.cdac.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಅಗ್ನಿವೀರ ವಾಯು, ಭಾರತೀಯ ವಾಯುಪಡೆಯಲ್ಲಿ ಅಗ್ನಿಪಥ ಯೋಜನೆಯಡಿಯಲ್ಲಿ ನೇಮಕ ಮಾಡಿಕೊಳ್ಳುವ ಹುದ್ದೆಯಾಗಿರುತ್ತದೆ. ಅಗ್ನಿವೀರ ವಾಯು ಹುದ್ದೆಗಳಿಗೆ ಅರ್ಜಿ ಹಾಕಲು, ಅಗ್ನಿಪಥ್‌ ವಾಯು ಆನ್‌ಲೈನ್‌ ಪೋರ್ಟಲ್‌ಗೆ ಭೇಟಿ ನೀಡಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅವಿವಾಹಿತರಾಗಿರಬೇಕು.

ವಿವರವಾದ ಅಧಿಸೂಚನೆ ಶೀಘ್ರದಲ್ಲಿ ಪ್ರಕಟವಾಗಲಿದೆ.

Published by HT...