ಭಾರತ, ಮಾರ್ಚ್ 11 -- Indian Army Agniveer Recruitment 2025: ಭಾರತೀಯ ಸೇನಾ ಅಗ್ನಿವೀರ್ ನೇಮಕಾತಿಗಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅಧಿಸೂಚನೆ ಆರಂಭವಾಗಿದೆ. ಈ ಪ್ರಕ್ರಿಯೆಯು ಮಾರ್ಚ್ 11ರ ಮಧ್ಯರಾತ್ರಿಯಿಂದ ಅಂದರೆ ಮಾರ್ಚ್ 12 ರಿಂದ ಆರಂಭವಾಗಲಿದೆ. ಇದಕ್ಕೂ ಮೊದಲು ಮಾರ್ಚ್ 8 ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದಿತ್ತು. ಆದರೆ ತಾಂತ್ರಿಕ ದೋಷಗಳ ಕಾರಣದಿಂದ ಮೂರು ದಿನಗಳ ಕಾಲ ಮುಂದೂಡಲಾಗಿತ್ತು. ಈ ಹುದ್ದೆಗೆ ವಿವಿಧ ರಾಜ್ಯಗಳ ಆಸಕ್ತ ಯುವಕರು ಅರ್ಜಿ ಸಲ್ಲಿಸಬಹುದು.

ಮಾರ್ಚ್ 12 ರಿಂದ ಏಪ್ರಿಲ್ 20ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಲಿಖಿತ ಪರೀಕ್ಷೆಯು ಏಪ್ರಿಲ್-ಮೇ ತಿಂಗಳಲ್ಲಿ ಮಾತ್ರ ನಡೆಯಲಿದೆ. ಈ ವರ್ಷದಿಂದ ಏಕಕಾಲದಲ್ಲಿ ಎರಡು ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮಾಹಿತಿಯ ಪ್ರಕಾರ ಜನರಲ್ ಡ್ಯೂಟಿ, ಟೆಕ್ನೀಷಿಯನ್, ಎರಡು ವಿಭಾಗಗಳ ಟ್ರೇಡ್ ಮತ್ತು ಆಫೀಸ್ ಅಸಿಸ್ಟೆಂಟ್ ಅಥವಾ ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆ ಸೇರಿ ಇನ್ನೂ ಕೆಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿ...