ಭಾರತ, ಏಪ್ರಿಲ್ 11 -- Agnathavasi Twitter Review: ಕಳೆದ 3 ವರ್ಷಗಳಿಂದ ಬಿಡುಗಡೆಗಾಗಿ ಕಾಯುತ್ತಿದ್ದ ಅಜ್ಞಾತವಾಸಿ ಸಿನಿಮಾಕ್ಕೆ ಇಂದು (ಏಪ್ರಿಲ್ 11) ಬಿಡುಗಡೆಯ ಭಾಗ್ಯ ಸಿಕ್ಕಿದೆ. 'ಗುಳ್ಟು' ಖ್ಯಾತಿಯ ಜರ್ನಾದನ ಚಿಕ್ಕಣ್ಣ ನಿರ್ದೇಶಿಸಿರುವ, ಸಪ್ತ ಸಾಗರದಾಚೆ ಎಲ್ಲೋ ಸರಣಿ ಸಿನಿಮಾ ಖ್ಯಾತಿಯ ಹೇಮಂತ್ ಎಂ ರಾವ್ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ರಂಗಾಯಣ ರಘು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಆರಂಭವಾಗಿ 3 ವರ್ಷ ಕಳೆದಿತ್ತು. ಚಿತ್ರ ಬಿಡುಗಡೆಗೆ ಮಾರುಕಟ್ಟೆ ಅನುಕೂಲವಾಗಿರಲಿಲ್ಲ, ಆ ಕಾರಣಕ್ಕೆ ಈಗ ಬಿಡುಗಡೆ ಮಾಡುತ್ತಿದ್ದೇವೆ ಎಂದು ನಿರ್ಮಾಪಕ ಹೇಮಂತ್ ರಾವ್ ಇತ್ತೀಚೆಗೆ ಹೇಳಿಕೊಂಡಿದ್ದರು.

ಅಜ್ಞಾತವಾಸಿ ಸಿನಿಮಾದಲ್ಲಿ ಪಾವನ ಗೌಡ ಹಾಗೂ ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಸೇರಿದಂತೆ ಹಲವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಕೃಷ್ಣರಾಜ್ ಎನ್ನುವವರು ಈ ಸಿನಿಮಾಕ್ಕೆ ಚಿ‌ತ್ರಕಥೆ ಬರೆದಿದ್ದಾರೆ.

ಅದ್ವೈತ ಛಾಯಾಗ್ರಾಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ, ಭ...