ಭಾರತ, ಫೆಬ್ರವರಿ 9 -- Aero India Show 2025: ಉದ್ಯಾನ ನಗರಿ ಬೆಂಗಳೂರಿನಲ್ಲಿ, ಏರೋ ಇಂಡಿಯಾ ನಡೆಸುತ್ತಿರುವ.. ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ನೀವು ನೋಡಲು ತೆರಳುವ ಮುನ್ನ ಕೆಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಅತೀವ ಬಿಲಿಸು ಹಾಗೂ ಧೂಳಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಕೆಲ ಸೂಚನೆಗಳನ್ನು ನಾವಿಲ್ಲಿ ನೀಡಿದ್ದೇವೆ.. ಈ ಕ್ರಮಗಳನ್ನು ಅನುಸರಿಸಿ ನೀವು ಆರಾಮವಾಗಿ ವೈಮಾನಿಕ ಪ್ರದರ್ಶನ ವೀಕ್ಷಿಸಿ.

ಟೋಪಿ: ವಾಯುಪಡೆ ನಿಲ್ದಾಣ ಯಲಹಂಕದಲ್ಲಿ ನಡೆಯುವ ಏರೋ ಇಂಡಿಯಾ ಶೋ ಸ್ಥಳದಲ್ಲಿ ತೀವ್ರ ಬಿಸಿಲಿರುವ ಕಾರಣ ಟೋಪಿಯನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕು. ಇಲ್ಲವಾದರೆ ಅಲ್ಲಿನ ತೀವ್ರ ಬಿಸಿಲಿನ ತಾಪಕ್ಕೆ ತಲೆಸುತ್ತುವ ಸಂಭವ ಇದೆ. ನಿತ್ರಾಣರಾಗುವ ಬದಲು ಬಿಸಿಲಿನಿಂದ ರಕ್ಷಣೆ ಪಡೆಯುವ ಸಲುವಾಗಿ ಟೋಪಿ ಬಳಸಿ.

ಕರವಸ್ತ್ರ: ಧೂಳು ಹಾಗೂ ಹೆಚ್ಚಿನ ಗಾಳಿ ಬೀಸುವ ಕಾರಣ ಕೆಲ ಸಂದರ್ಭಗಳಲ್ಲಿ ನಿಮಗೆ ಕರವಸ್ತ್ರದ ಅವಶ್ಯಕತೆ ಇರುತ್ತದೆ.

ಮುಖಗವಸು: ಹೆಚ್ಚು ಧೂಳಿನಿಂದ ಕೂಡಿದ ಸ್ಥಳವಾಗಿರುವ ಕಾರಣ ಗಾಳಿ...