ಭಾರತ, ಫೆಬ್ರವರಿ 7 -- Aero India 2025: ಬೆಂಗಳೂರು ಯಲಹಂಕದಲ್ಲಿ ಏರೋ ಇಂಡಿಯಾ ಪ್ರದರ್ಶನಕ್ಕೆ ದಿನಗಣನೆ ಶುರುವಾಗಿದೆ. ಫೆ 10 ರಿಂದ 14ರ ತನಕ ನಡೆಯಲಿರುವ ಏರ್ ಶೋದಲ್ಲಿ ಭಾರತೀಯ ವಾಯುಪಡೆ ವಿಮಾನಗಳು ಪ್ರದರ್ಶನ ನೀಡಲಿವೆ. ಮೊದಲ ಮೂರು ದಿನ ಜಾಗತಿಕ ನಾಯಕರು, ರಕ್ಷಣಾ ಕ್ಷೇತ್ರದ ವ್ಯಾಪಾರೋದ್ಯಮಿಗಳಿಗೆ ಪ್ರದರ್ಶನ ವ್ಯಾಪಾರ ಒಪ್ಪಂದಗಳಿಗೆ ವೇದಿಕೆಯಾಗಲಿದೆ. ಇನ್ನೆರಡು ದಿನ ಸಾರ್ವಜನಿಕರಿಗೆ ಪ್ರದರ್ಶನ ವೀಕ್ಷಣೆಗೆ ಅವಕಾಶ ಇರಲಿದೆ. ಈ ಸಂದರ್ಭದಲ್ಲಿ ವಿಶ್ವದ ಬಲಾಢ್ಯ ವಾಯುಪಡೆಗಳ ಅವಲೋಕನ ಮಾಡುವುದಕ್ಕೆ ಹಾಗೂ ಅವುಗಳ ಪೈಕಿ ಭಾರತದ ವಾಯುಪಡೆಯ ಸ್ಥಾನ ಎಷ್ಟನೇಯದ್ದು ಎಂದು ತಿಳಿದುಕೊಳ್ಳುವುದಕ್ಕೆ ಈ ಹೊತ್ತು ಒಂದು ನಿಮಿತ್ತ.

ವಿಶ್ವದ ಪ್ರಮುಖ 10 ರಾಷ್ಟ್ರಗಳ ವಾಯುಪಡೆಯಲ್ಲಿ ಬಹಳಷ್ಟು ವಿಮಾನಗಳಿವೆ. ಈ ಪೈಕಿ ಗರಿಷ್ಠ ವಿಮಾನಗಳು ಅಮೆರಿಕದ ವಾಯುಪಡೆಯಲ್ಲಿವೆ. ಭಾರತ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅಮರಿಕ- 13,043, ರಷ್ಯಾ - 4,292, ಚೀನಾ - 3,309, ಭಾರತ - 2,229, ದಕ್ಷಿಣ ಕೊರಿಯಾ- 1,592, ಜಪಾನ್ - 1,443,...