ಭಾರತ, ಫೆಬ್ರವರಿ 4 -- Aero India 2025: ಬೆಂಗಳೂರಿನಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿರುವ ಏರೋ ಇಂಡಿಯಾದ 15 ನೇ ಆವೃತ್ತಿಗೆ ಮುಂಚಿತವಾಗಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಾಯುಪ್ರದೇಶದ ನಿರ್ಬಂಧಗಳಿಂದಾಗಿ ಫೆಬ್ರವರಿ 5 ಮತ್ತು 14 ರ ನಡುವೆ ತಾತ್ಕಾಲಿಕವಾಗಿ ವಿಮಾನ ಯಾನ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೇಳಿದೆ. ಈ ಕುರಿತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಎಕ್ಸ್ ಪೋಸ್ಟ್ ಮಾಡಿದ್ದು, ವಿಮಾನ ಯಾನ ಕೈಗೊಳ್ಳುವ ಮೊದಲು ಪ್ರಯಾಣದ ಯೋಜನೆ ರೂಪಿಸಿಕೊಳ್ಳುವುದಕ್ಕೆ ಏರ್‌ಸ್ಪೇಸ್ ಬಂದ್ ಆಗಿರುವ ಸಮಯಗಳ ಬಗ್ಗೆ ಗಮನಹರಿಸುವಂತೆ ವಿನಂತಿಸಿದೆ.

ಫೆಬ್ರವರಿ 5 ರಿಂದ 14 ರವರೆಗೆ ಏರೋ ಇಂಡಿಯಾ ಪ್ರದರ್ಶನ ಇರುವ ಕಾರಣ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮೂಲಕ ಪ್ರಯಾಣಿಸುವ ಪ್ರಯಾಣಿಕರು ಆಯಾ ವಿಮಾನಯಾನ ಸಂಸ್ಥೆಯಿಂದ ಪ್ರಕಟಿತ ಪರಿಷ್ಕೃತ ವಾಯುಪ್ರದೇಶದ ಮುಚ್ಚುವ ಸಮಯ ಮತ್ತು ಹಾರಾಟದ ವೇಳಾಪಟ್ಟಿಗಳ ಬಗ್ಗೆ ಗಮನಹರಿಸಬೇಕು ಎಂದು ಸೂಚಿ...