Bangalore, ಫೆಬ್ರವರಿ 3 -- Aero India 2025: ಎರಡು ವರ್ಷಕ್ಕೊಮ್ಮೆ ನಡೆಯುವ ಏರೋ ಇಂಡಿಯಾ ಶೋಗೆ ಬೆಂಗಳೂರು ನಗರ ಸಿದ್ದವಾಗಿದೆ. ಮುಂದಿನ ವಾರ ಆರಂಭವಾಗಲಿರುವ ಐದು ದಿನಗಳ ಏರೋ ಇಂಡಿಯಾ 2025ರ ಪ್ರದರ್ಶನಕ್ಕೆ ದಿನಗಣನೆ ಶುರುವಾಗಿದ್ದು, ಈ ಬಾರಿ ಬಗೆಬಗೆಯ ರಕ್ಷಣಾ ವಿಮಾನಗಳು ಆಗಸದಲ್ಲಿ ಮೋಡಿ ಮಾಡಲಿವೆ. ಇದಲ್ಲದೇ ರಕ್ಷಣಾ ವಲಯದಲ್ಲಿನ ಪ್ರಗತಿಗೆ ಸಂಬಂಧಿಸಿ ಬೆಂಗಳೂರಿನ ಯಲಹಂಕದಲ್ಲಿರುವ ವೈಮಾನಿಕ ಸಂಸ್ಥೆಯ ಆವರಣದಲ್ಲಿ ಬೃಹತ್‌ ವಸ್ತು ಪ್ರದರ್ಶನಗಳೂ ನಡೆಯಲಿವೆ. ಇದೇ ವೇಳೆ ರಕ್ಷಣಾ ವೈಮಾನಿಕ ಕ್ಷೇತ್ರದಲ್ಲಿ ಯುದ್ದ ವಿಮಾನಗಳು, ಉಪಕರಣಗಳು ಸೇರಿ ಉತ್ಪನ್ನಗಳ ಖರೀದಿಗೂ ಹಲವು ದೇಶಗಳೊಂದಿಗೆ ಒಪ್ಪಂದಗಳಾಗುವ ನಿರೀಕ್ಷೆಯನ್ನು ಹೊಂದಲಾಗಿದೆ. ಏರೋ ಇಂಡಿಯಾ ಪ್ರಮುಖ ವಹಿವಾಟಿಗೂ ದಾರಿ ಮಾಡಿಕೊಡಲಿದೆ.

ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನದ 15ನೇ ಆವೃತ್ತಿಯ ಏರೋ ಇಂಡಿಯಾ 2025- 2025ರ ಫೆಬ್ರವರಿ 10 ರಿಂದ 14 ರವರೆಗೆ ಕರ್ನಾಟಕದ ಬೆಂಗಳೂರಿನ ಯಲಹಂಕದ ವಾಯುನಲೆಯ ಕೇಂದ್ರದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಮೊದಲ ಮೂರು ದಿನಗಳು...