Bangalore, ಫೆಬ್ರವರಿ 6 -- Aero India 2025: ಮುಂದಿನ ನಾಲ್ಕು ದಿನಗಳಲ್ಲಿ ಇದೇ ಸಮಯದಲ್ಲಿ ಬೆಂಗಳೂರಿನ ಆಗಸದಲ್ಲಿ ಲೋಹದ ಹಕ್ಕಿಗಳ ಸಂಚಾರ ಗಮನ ಸೆಳೆಯಲಿದೆ. ಬೆಂಗಳೂರಿನ ಬಾನಂಗಳದಲ್ಲಿ ಬೆರಗುಗೊಳಿಸುವ ದೃಶ್ಯವನ್ನು ವೀಕ್ಷಿಸುವ ಅವಕಾಶ ಎರಡು ವರ್ಷದ ನಂತರ ಮತ್ತೆ ಬಂದಿದೆ. ಫೆಬ್ರವರಿ 10-14 ರಿಂದ, ಪ್ರತಿಷ್ಠಿತ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ ಅದ್ಭುತ ವಾಯು ಪ್ರದರ್ಶನವನ್ನು ಪ್ರದರ್ಶಿಸುವ ಮೂಲಕ ಬೆಂಗಳೂರಿನ ಬಾನಂಗಳವನ್ನು ಬೆಳಗಲಿದೆ. ಬೆಂಗಳೂರು ಏರ್‌ಶೋಗೆ ಈಗಾಗಲೇ ಸಿದ್ದತೆಗಳು ಪೂರ್ಣಗೊಂಡಿದ್ದು. ಐದು ದಿನಗಳ ವಾಯು ಪ್ರದರ್ಶನ, ರಕ್ಷಣಾ ಉತ್ಪನ್ನಗಳ ಪ್ರದರ್ಶನ ಹಾಗೂ ಬಾನಂಗಳದಲ್ಲಿ ಹಾರಾಟಕ್ಕೆ ವೇದಿಕೆಯನ್ನು ಅಣಿಗೊಳಿಸಲಾಗಿದೆ. ಬೆಂಗಳೂರು ಮಾತ್ರವಲ್ಲದೇ ಭಾರತದ ನಾನಾ ಭಾಗಗಳಿಂದಲೂ ಆಸಕ್ತರು ಏರೋ ಇಂಡಿಯಾದ ಭಾಗವಾಗಲು ಆಗಮಿಸುತ್ತಿದ್ದಾರೆ.

ಭಾರತೀಯ ವಾಯುಪಡೆಯ ರಾಯಭಾರಿಗಳು" ಎಂದು ಕರೆಯಲ್ಪಡುವ ಸೂರ್ಯ ಕಿರಣ್‌ ತಂಡ ತನ್ನ ಅದ್ಭುತ ಕೌಶಲಕ್ಕೆ ಹೆಸರಾಗಿದೆ. ಕೆಂಪು ಮತ್ತು ಬಿಳಿ ಹಾಕ್ ಎಂಕೆ-132 ಜೆಟ್‌ಗಳನ್ನು ಹಾರಿ...