Bangalore, ಫೆಬ್ರವರಿ 9 -- ಬೆಂಗಳೂರು: ಇತಿಹಾಸದಲ್ಲಿ ಮೊದಲ ಬಾರಿಗೆ ಏರೋ ಇಂಡಿಯಾ 2025 ವಿಶ್ವದ ಎರಡು ಅತ್ಯಂತ ಮುಂದುವರಿದ ಐದನೇ ತಲೆಮಾರಿನ ಯುದ್ಧ ವಿಮಾನಗಳಾದ ರಷ್ಯಾದ ಸು-57 ಮತ್ತು ಅಮೇರಿಕನ್ ಎಫ್-35 ಲೈಟ್ನಿಂಗ್ II ಪಾಲ್ಗೊಳ್ಲುವಿಕೆಗೆ ಸಾಕ್ಷಿಯಾಗಲಿದೆ. ಇದು ಜಾಗತಿಕ ರಕ್ಷಣಾ ಸಹಯೋಗ ಮತ್ತು ತಾಂತ್ರಿಕ ಪ್ರಗತಿಯಲ್ಲಿ ಒಂದು ಮೈಲಿಗಲ್ಲಿಗೂ ಸಾಕ್ಷಿಯಾಗಲಿದೆ. ವಾಯುಯಾನ ಉತ್ಸಾಹಿಗಳು ಮತ್ತು ರಕ್ಷಣಾ ತಜ್ಞರಿಗೆ ಈ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ವೀಕ್ಷಿಸುವ ಅಪ್ರತಿಮ ನಿರೀಕ್ಷೆಯನ್ನು ನೀಡುತ್ತದೆ. ಭಾರತದ ಏರೋ ಇಂಡಿಯಾ ಪ್ರದರ್ಶನವು ಜಾಗತಿಕ ಮಟ್ಟದಲ್ಲೂ ವಿಶ್ವಾಸಾರ್ಹತೆ ಪಡೆದಿರುವುದರಿಂದ ಜಗತ್ತಿನ ಪ್ರಮುಖ ದೇಶಗಳು ಈ ಪ್ರದರ್ಶನದಲ್ಲಿ ಭಾಗವಹಿಸುವುದು ವಿಶೇಷವೇ.

ಸು-57 ಮತ್ತು ಎಫ್-35 ಎರಡರ ಸೇರ್ಪಡೆಯು ಅಂತಾರಾಷ್ಟ್ರೀಯ ರಕ್ಷಣಾ ಮತ್ತು ಏರೋಸ್ಪೇಸ್ ಸಹಯೋಗಕ್ಕೆ ಪ್ರಮುಖ ಕೇಂದ್ರವಾಗಿ ಭಾರತದ ಸ್ಥಾನವನ್ನು ಎತ್ತಿ ತೋರಿಸುತ್ತದೆ. ಏರೋ ಇಂಡಿಯಾ 2025 ಪೂರ್ವ ಮತ್ತು ಪಶ್ಚಿಮ ಐದನೇ ತಲೆಮಾರಿನ ಯುದ್ಧ ವಿಮಾನ ತಂತ್ರ...