Bengaluru, ಏಪ್ರಿಲ್ 4 -- ಆಧುನಿಕ ಜೀವನಶೈಲಿಯಲ್ಲಿ, ಒತ್ತಡವು ಸಾಮಾನ್ಯ ಸಮಸ್ಯೆಯಾಗಿದೆ. ಕಛೇರಿ ಕೆಲಸದ ಒತ್ತಡಗಳು, ಕೌಟುಂಬಿಕ ಒತ್ತಡಗಳು, ಬಿಡುವಿಲ್ಲದ ದೈನಂದಿನ ಕೆಲಸಗಳು, ಒತ್ತಡವನ್ನು ಹೊತ್ತು ತರುವ ಯಾವುದಾದರೊಂದು ಕೆಲಸ ಇದ್ದೇ ಇರುತ್ತದೆ. ಇದನ್ನು ಕಡಿಮೆ ಮಾಡಲು ಧ್ಯಾನವನ್ನು ಪ್ರಯತ್ನಿಸಬಹುದು. ಅದರ ಜೊತೆಗೆ, ಏರಿಯಲ್ ಯೋಗ ಕೂಡ ಸಹಾಯಕವಾಗಿದೆ. ಇದನ್ನು ರೇಷ್ಮೆ ಬಟ್ಟೆಯ ರೀತಿ ಇರುವ ಒಂದು ಉದ್ದವಾದ ವಸ್ತ್ರವನ್ನು ಮೇಲಿನಿಂದ ಜೋಲಿಯಂತೆ ನೇತು ಹಾಕಿ ಅದನ್ನು ಬಳಸಿ ವಿವಿಧ ಯೋಗಾಸನಗಳನ್ನು ಮಾಡಲಾಗುತ್ತದೆ. ಈ ರೀತಿಯ ಬಟ್ಟೆಗೆ ಹ್ಯಾಮಾಕ್ ಎಂದು ಕರೆಯುತ್ತಾರೆ. ಏರಿಯಲ್ ಯೋಗ ದೇಹಕ್ಕೆ ಶಕ್ತಿ ಹಾಗೂ ಧೃಡತೆ ಹೆಚ್ಚಿಸಿ, ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ ಎಂದು ಹೇಳುತ್ತಾರೆ ಹಲವು ಏರಿಯಲ್ ಯೋಗ ತಜ್ಞರು.

ಏರಿಯಲ್ ಯೋಗವನ್ನು ಆ್ಯಂಟಿ ಗ್ರಾವಿಟಿ ಯೋಗ ಅಂದರೆ ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಮಾಡಲಾಗುವ ಯೋಗ. ಒಂದು ರೇಷ್ಮೆ ಬಟ್ಟೆಯನ್ನು ಮೇಲಿನಿಂದ ಜೋತುಬಿಟ್ಟು, ಅದನ್ನು ಬಳಸಿಕೊಂಡು ವಿವಿಧ ಆಸನಗಳನ್ನು ಮಾಡಲಾಗುವು...