ಭಾರತ, ಮಾರ್ಚ್ 13 -- ಪ್ರಯಾಣ ಮಾಡುವುದು ಅಥವಾ ಪ್ರವಾಸ ಹಲವರಿಗೆ ಇಷ್ಟ. ಆದರೆ ಕೆಲವರು ಅಡ್ವೆಂಚರ್ ಪ್ರಿಯರಿರುತ್ತಾರೆ. ಅವರಿಗೆ ಸಾಹಸ ಚಟುವಟಿಕೆಗಳಲ್ಲಿ ತೊಡಗುವುದು ಎಂದರೆ ಬಹಳ ಇಷ್ಟವಿರುತ್ತದೆ. ಅಂತಹ ಸ್ಥಳಗಳಿಗೆ ಮಾತ್ರ ಹೋಗಲು ಅವರು ಇಷ್ಟಪಡುತ್ತಾರೆ. ಭಾರತವು ಹಲವು ಪ್ರವಾಸಿ ತಾಣಗಳನ್ನು ಹೊಂದಿರುವ ನಾಡು. ಇಲ್ಲಿ ಸುಂದರ ಪ್ರಾಕೃತಿಕ ತಾಣಗಳಿಂದ ಹಿಡಿದು ಸಾಹಸಿಪ್ರಿಯರಿಗೆ ಇಷ್ಟವಾಗುವ ಅಡ್ವೆಂಚರಸ್ ತಾಣಗಳು ಸಾಕಷ್ಟಿವೆ.

ನೀವು ಕೂಡ ಸಾಹಸಪ್ರಿಯರಾಗಿದ್ದು, ಈ ವರ್ಷ ಬೇಸಿಗೆಯಲ್ಲಿ ಇಂತಹ ಸ್ಥಳಗಳಿಗೆ ಪ್ರಯಾಣ ನೀಡಬೇಕು ಎಂದು ಬಯಸುತ್ತಿದ್ದರೆ ಭಾರತದ ಬೆಸ್ಟ್ ಸಾಹಸೀತಾಣ ಬಗ್ಗೆ ನಾವು ನಿಮಗೆ ಹೇಳುತ್ತೇವೆ. ಈ ಸ್ಥಳಗಳಲ್ಲಿ ನೀವು ಒಂಟಿಯಾಗಿ, ಸ್ನೇಹಿತರ ಜೊತೆ ಅಥವಾ ಕುಟುಂಬದವರ ಜೊತೆ ತೆರಳಿ ಎಂಜಾಯ್‌ ಮಾಡಬಹುದು. ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾದ ಭಾರತದ 5 ಪ್ರಸಿದ್ಧ ಸ್ಥಳಗಳ ಬಗ್ಗೆ ಇಲ್ಲಿದೆ ಮಾಹಿತಿ ನೀಡಲಾಗಿದೆ.

ಹಿಮಾಲಯ ಪರ್ವತಗಳ ನಡುವೆ ಇರುವ ಋಷಿಕೇಶವು ಕೇವಲ ಆಧ್ಯಾತ್ಮಿಕ ವಾತಾವರಣದಿಂದ ಮಾತ್ರವಲ್ಲ, ಇದು ಸ...