ಭಾರತ, ಏಪ್ರಿಲ್ 13 -- ನೆಟ್‌ಫ್ಲಿಕ್ಸ್‌ನಲ್ಲಿರುವ 'ಅಡಾಲಸೆನ್ಸ್ (Adolescence - ಹದಿಹರೆಯ)' ಎಂಬ ಬ್ರಿಟಿಷ್ ವೆಬ್‌ಸೀರೀಸ್ ಕುರಿತು ಬಹಳ ಚರ್ಚೆಗಳಾಗುತ್ತಿವೆ. ಇದು ಕಾಲ್ಪನಿಕ ಕಥೆಯಾಗಿದ್ದು, ಇಂಗ್ಲೆಂಡ್‌ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಇಂಗ್ಲೆಂಡಿನ 13 ವರ್ಷದ ಬಾಲಕ (ಜೆಮ್ಮಿ) ತನ್ನ ಶಾಲೆಯಲ್ಲಿ ಓದುತ್ತಿರುವ ಹುಡುಗಿಯನ್ನು ಹತ್ಯೆ ಮಾಡಿರುತ್ತಾನೆ. ಪ್ರಾರಂಭದಲ್ಲೇ ಪೋಲಿಸರು ಸಿಸಿಟಿವಿ ಕ್ಲಿಪ್ಸ್ ಆಧಾರದ ಮೇಲೆ ಈ ಬಾಲಕನೇ ತಪ್ಪಿಸ್ಥತನೆಂದು ಅರೆಸ್ಟ್ ಮಾಡುತ್ತಾರೆ. ಬಾಲಕನೇ ಈ ಕೃತ್ಯ ಮಾಡಿರುವುದೆಂದು ಸಾಬೀತು ಕೂಡ ಆಗುತ್ತದೆ. ಆದರೆ ಬಾಲಕ ತಪ್ಪು ಒಪ್ಪಿಕೊಳ್ಳುವುದಿಲ್ಲ. ಪಶ್ಚಾತ್ತಾಪವನ್ನೂ ಪಡುವುದಿಲ್ಲ.

ಹಾಗಾಗಿ ಮುಂದಿನ ಕಥೆಯಲ್ಲಿ ಯಾವುದೇ ಸಸ್ಪೆನ್ಸ್ ಉಳಿದುಕೊಳ್ಳುವುದಿಲ್ಲ. ಹಾಗಾಗಿ, ಇದು ಖಂಡಿತವಾಗಿಯೂ ಥ್ರಿಲರ್ ಅಥವಾ ಸಸ್ಪೆನ್ಸ್ ಸೀರಿಸ್ ಅಂತೂ ಅಲ್ಲ. ಆದರೆ ವೀಕ್ಷಿಸುವಾಗ ಕುತೂಹಲ ಹೆಚ್ಚಾಯಿತು. ಯಾವ ಕಾರಣಕ್ಕಾಗಿ ಆ ಬಾಲಕ ಇಂತಹ ಕೃತ್ಯ ಮಾಡಿರಬಹುದು? ಜೈಲಿನಲ್ಲ...