Bengaluru, ಫೆಬ್ರವರಿ 6 -- Adhipatra: ಬಿಗ್‌ ಬಾಸ್‌ ಕನ್ನಡ ಸೀಸನ್‌ 9ರ ವಿಜೇತ ರೂಪೇಶ್‌ ಶೆಟ್ಟಿ, ಸದ್ಯ ಹೊಸ ಸಿನಿಮಾ ಬಿಡುಗಡೆಯ ಸಂಭ್ರಮದಲ್ಲಿದ್ದಾರೆ. ಅಧಿಪತ್ರ ಹೆಸರಿನ ಸಿನಿಮಾ ಇನ್ನೇನು ನಾಳೆ (ಫೆ. 7) ಬಿಡುಗಡೆ ಆಗಲಿದೆ. ಕರಾವಳಿ ಭಾಗದ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯನ್ನು ಆಯ್ದುಕೊಂಡು ಬಂದ ನಿರ್ದೇಶಕ ಚಯನ್ ಶೆಟ್ಟಿ, ಕನ್ನಡ ಸಿನಿಪ್ರೇಮಿಗಳನ್ನು ಅದ್ಯಾವ ರೀತಿಯ ಸೆಳೆಯಲಿದ್ದಾರೆ ಎಂಬುದು ನಾಳೆಗೆ ಗೊತ್ತಾಗಲಿದೆ. ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ಬಂದಿದ್ದ ಚಿತ್ರತಂಡ, ಇದೇ ಸಿನಿಮಾ ಬಗ್ಗೆ ಮಾಹಿತಿ ಬಿಚ್ಚಿಟ್ಟಿತು.

ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಕರಾವಳಿಯ ಆಟಿ ಕಳೆಂಜ ಕಥೆಗೆ ನಿರ್ದೇಶಕ ಚಯನ್ ಶೆಟ್ಟಿ ದೃಶ್ಯ ರೂಪ ಕೊಟ್ಟಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಚಯನ್ ಒಂದೊಳ್ಳೆ ಕಥೆಯನ್ನು ಪ್ರೇಕ್ಷಕರ ಮುಂದೆ ಹರವಿಡಲು ಹೊರಟ್ಟಿದ್ದಾರೆ. ಇವರ ವಿಷನ್‌ಗೆ ಕೆ. ಆರ್ ಸಿನಿ ಕಂಬೈನ್ಸ್ ಬ್ಯಾನರ್‌ನಡಿ‌ ದಿವ್ಯಾ ನಾರಾಯಣ್, ಕುಲದೀಪ್ ರಾಘವ್ ಲಕ್ಷ್ಮಿ ಗೌಡ ಬಂಡವಾಳ ಹೂಡಿದ್ದಾರೆ. ಬೆಳಕು ಫಿಲಂಸ್ ಅಡಿಯಲ್ಲಿ ಕಾರ್ತಿಕ್ ಶ...