ಭಾರತ, ಮಾರ್ಚ್ 22 -- Actress Salary: ಭಾರತದ ಚಿತ್ರರಂಗದಲ್ಲಿ ಕೆಲವು ನಟಿಯರು, ನಟರ ಸಂಭಾವನೆ ವಿಷಯ ರಹಸ್ಯವಾಗಿರುತ್ತದೆ. ಹೀಗಿದ್ದರೂ, ದೊಡ್ಡ ಮೊತ್ತದ ವೇತನ, ಸಂಭಾವನೆ ಪಡೆಯುವ ಕಲಾವಿದರ ಮಾಹಿತಿ ಆಗಾಗ ಜಾಹೀರು ಆಗುವುದುಂಟು. ಭಾರತೀಯ ಚಿತ್ರರಂಗದಲ್ಲಿ ನಟರು ಹೆಚ್ಚು ಸಂಭಾವನೆ ಪಡೆಯುತ್ತಾರೆ. ನಟಿಯರು ಸಂಭಾವನೆ ಪಡೆಯುತ್ತಾರೆ. ಈ ಲಿಂಗ ತಾರತಮ್ಯದ ಕುರಿತು ಇತ್ತೀಚೆಗೆ ಕನ್ನಡ ನಟಿ ರಮ್ಯಾ ಬೇಸರ ವ್ಯಕ್ತಪಡಿಸಿದ್ದರು. ಕೆಲವು ಸೂಪರ್‌ಸ್ಟಾರ್‌ ನಟರು ಒಂದೊಂದು ಸಿನಿಮಾಕ್ಕೆ 100 ಕೋಟಿ ರೂಪಾಯಿಗೂ ಅಧಿಕ ವೇತನ ಪಡೆಯುತ್ತಾರೆ. ಆದರೆ, ನಟಿಯರು ಅಷ್ಟೊಂದು ವೇತನ ಪಡೆಯುವುದಿಲ್ಲ. ಈಗ ಕರ್ನಾಟಕ ಮೂಲದ ರಶ್ಮಿಕಾ ಮಂದಣ್ಣ ಉತ್ತಮ ಸಂಭಾವನೆ ಪಡೆಯುವ ನಟಿಗಳಲ್ಲಿ ಒಬ್ಬರು. ಸಂಭಾವನೆ ವಿಚಾರದಲ್ಲಿ ಭಾರತದ ನಟಿಯೊಬ್ಬರು ಈಗ ಸುದ್ದಿಯಲ್ಲಿದ್ದಾರೆ. ಸುಮಾರು ಆರು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಇದ್ದ ನಟಿ ಈಗ ತನ್ನ ಮುಂದಿನ ಸಿನಿಮಾಕ್ಕೆ ಬರೋಬ್ಬರಿ 30 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಬಿಟೌನ್‌ನಲ್ಲಿ ವೈರಲ್‌ ಆಗಿ...