Bangalore, ಮಾರ್ಚ್ 12 -- ಡೆವಿಲ್‌ ಸಿನಿಮಾದ ಶೂಟಿಂಗ್‌ ಮತ್ತೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳ ನಡೆಯಿಂದ ದರ್ಶನ್‌ಗೆ ಬೇಸರವಾಗಿದೆ. ಇದರ ಪರಿಣಾಮವಾಗಿ ಡೆವಿಲ್‌ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಬೇಕಿದ್ದ ದರ್ಶನ್‌ ಅಕ್ಕನ ಮಗನಾದ ಚಂದುವಿಗೆ ಶಿಕ್ಷೆಯಾಗಿದೆ. ಹೌದು, ಅಭಿಮಾನಿಯೊಬ್ಬರ ವರ್ತನೆಯಿಂದ ಬೇಸರಗೊಂಡ ದರ್ಶನ್‌ ತನ್ನ ಅಕ್ಕನ ಮಗನನ್ನು ಡೆವಿಲ್‌ ಸಿನಿಮಾದಿಂದ ತೆಗೆದಿದ್ದಾರೆ. ಇದನ್ನು ಖುದ್ದಾಗಿ ನಟ ದರ್ಶನ್‌ ಸೋಷಿಯಲ್‌ ಮೀಡಿಯಾದಲ್ಲಿ ತಿಳಿಸಿದ್ದಾರೆ. ಚಂದು ಅಥವಾ ನನ್ನ ಮಗ ವಿನೀಶ್‌ನನ್ನು ಚೆನ್ನಾಗಿ ನೋಡಿಕೊಂಡರೆ ನನಗೆ ಹತ್ತಿರವಾಗಬಹುದು ಎಂದುಕೊಂಡರೆ ಅದನ್ನು ಮನಸ್ಸಿನಿಂದ ತೆಗೆದುಹಾಕಿ ಎಂದು ನಟ ದರ್ಶನ್‌ ಹೇಳಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ನಟ ದರ್ಶನ್‌ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಅಭಿಮಾನಿಯೊಬ್ಬರು ದರ್ಶನ್‌ ಅಕ್ಕನ ಮಗ ಚಂದುವಿನ ಕಾಲಿಗೆ ನಮಸ್ಕರಿಸುವ ದೃಶ್ಯವಿದೆ. ಈ ವಿಡಿಯೋ ಹಂಚಿಕೊಂಡ ದರ್ಶನ್‌ ಹೀಗೆ ಬರೆದಿದ್ದಾರೆ.

"ಎಲ್ಲಾ ನನ್ನ ಸೆಲೆಬ್ರಿಟಿಸ್ ಗಳಿ...