Bengaluru, ಫೆಬ್ರವರಿ 24 -- ಬಿಸಿಲು ಹೆಚ್ಚಾಗುತ್ತಿರುವ ಪರಿಣಾಮ, ಜನರು ಎಸಿ ಮತ್ತು ಕೂಲರ್, ಫ್ಯಾನ್ ಮೊರೆ ಹೋಗುವುದು ಸಾಮಾನ್ಯ. ರಾತ್ರಿ ಮತ್ತು ಹಗಲಿನಲ್ಲೂ ಇವು ನಿರಂತರ ಚಾಲನೆಯಲ್ಲಿ ಇರುವ ಸ್ಥಿತಿ ನಿರ್ಮಾಣವಾಗಿದೆ. ಹಾಗಿರುವಾಗ ವಿದ್ಯುತ್ ಬಿಲ್ ಏರಿಕೆಯಾಗುವುದು ಸಹಜ. ಯಾಕೆಂದರೆ ಎಸಿ ಘಟಕ, ಹೆಚ್ಚಿನ ವಿದ್ಯುತ್ ಬಳಕೆ ಮಾಡುತ್ತದೆ. ಕೂಲರ್ ಮತ್ತು ಫ್ಯಾನ್ ಆದರೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಆದರೆ ಎಸಿ ಬಳಸಿದರೆ ಮಾತ್ರ, ವಿದ್ಯುತ್ ಬಿಲ್ ಹೆಚ್ಚಳವಾಗುತ್ತದೆ. ಆದರೆ ಬಿಸಿಲಿನ ತಾಪ ತಗ್ಗಿಸಲು ಮಾತ್ರ ಎಸಿ ಬಳಸುವುದು ಅನಿವಾರ್ಯ ಎನ್ನುವಂತಾಗಿದೆ. ಹೀಗಾಗಿ ಎಸಿ ಬಳಸಿದರೂ, ವಿದ್ಯುತ್ ಬಿಲ್ ಉಳಿಸಲು ಇಲ್ಲವೇ ಕಡಿಮೆ ಬರುವಂತೆ ಮಾಡಲು ಇಲ್ಲಿ ಕೆಲವೊಂದು ಟಿಪ್ಸ್ ನೀಡಲಾಗಿದೆ.

ನಿಮ್ಮ ಮನೆ ಅಥವಾ ಕಚೇರಿಯ ಎಸಿಯನ್ನು ಪರಿಣಾಮಕಾರಿಯಾಗಿ ಬಳಸಲು ಮತ್ತು ಅದರ ಅನಾನುಕೂಲಗಳನ್ನು ಕಡಿಮೆ ಮಾಡಲು ಇಲ್ಲಿದೆ ಸಲಹೆ

ಎಸಿ ಬಳಸುವಾಗ, ಆರಾಮ ಮತ್ತು ಇಂಧನ ದಕ್ಷತೆಯ ನಡುವಿನ ಸಮತೋಲನಕ್ಕಾಗಿ ನಿಮ್ಮ AC ಯನ್ನು 24-26degC ಗೆ ಹೊಂದಿಸ...