Bengaluru, ಫೆಬ್ರವರಿ 22 -- ಬಿಸಿಲಿನ ಬೇಗೆಯಿಂದ ಪಾರಾಗಲು ಮನೆಗೆ ಎಸಿ ಖರೀದಿಸಬೇಕು ಅಂದುಕೊಂಡಿದ್ದೀರಾ? ಜಾಹೀರಾತುಗಳಿಗೆ ಮಾರು ಹೋಗಿ ಕಡಿಮೆ ಮೊತ್ತ, ಹೆಚ್ಚು ಆಫರ್ ಇರುವ ಎಸಿ ಕೊಂಡುಕೊಳ್ಳಬೇಕು ಎಂದುಕೊಂಡಿದ್ದೀರಾ? ಹಾಗಾದರೆ ಬೆಲೆಯ ಜೊತೆಗೆ ನೀವು ಕೊಳ್ಳುವ ಎಸಿಯ ಸಾಮರ್ಥ್ಯ, ಇಂಧನ ದಕ್ಷತೆ, ಸ್ಮಾರ್ಟ್ ವೈಶಿಷ್ಟ್ಯಗಳ ಬಗ್ಗೆ ನೀವು ತಿಳಿಯಲೇಬೇಕು. ಇ-ಕಾಮರ್ಸ್ ವೆಬ್‌‌‌‌‌‌ಸೈಟ್‌‌‌‌‌‌ಗಳಲ್ಲಿನ ಉತ್ಪನ್ನಗಳ ಸುಲಭ ಲಭ್ಯತೆಯಿಂದಾಗಿ ನಿಮ್ಮ ಮನೆ ಅಥವಾ ಕೆಲಸದ ಸ್ಥಳಕ್ಕೆ ಹೊಸ ಹವಾನಿಯಂತ್ರಣ (ಎಸಿ) ಖರೀದಿಸುವುದು ಇಂದಿನ ದಿನಗಳಲ್ಲಿ ಕಷ್ಟದ ಕೆಲಸವಲ್ಲ. ಉತ್ತಮ ಎಸಿಯನ್ನು ಆಯ್ಕೆ ಮಾಡಲು ನೀವು ಎಸಿ ಪ್ರಕಾರ, ಬ್ರಾಂಡ್, ಟನ್ ಮತ್ತು ವೈಶಿಷ್ಟ್ಯಗಳಂತಹ ಮೂಲ ವಿಶೇಷಣಗಳನ್ನು ಪರಿಶೀಲಿಸಲೇಬೇಕು.

ಮುಖ್ಯವಾಗಿ ಎರಡು ವಿಧಗಳಲ್ಲಿ ಲಭ್ಯವಿರುವ ಎಸಿಯಲ್ಲಿ ನಿಮಗೆ ಅಗತ್ಯವಿರುವುದನ್ನು ನೀವು ಆಯ್ಕೆ ಮಾಡಬಹುದು. ಎಲ್ಲಾ ಪ್ರಕಾರಗಳಲ್ಲೂ ಅನುಕೂಲಗಳು ಮತ್ತು ಅನಾನುಕೂಲಗಳಿವೆ. ನಿಮ್ಮ ಅವಶ್ಯಕತೆಗಳ ಬಗ್ಗೆ ನೀವು ಸ್ಪಷ್ಟವಾಗಿದ್ದರೆ, ನಿಮಗ...