ಭಾರತ, ಮಾರ್ಚ್ 14 -- Abhyanga Benefits: ಯುಗಾದಿ ಹಿಂದೂಗಳು ಆಚರಿಸುವ ಬಹಳ ಪ್ರಮುಖ ಹಬ್ಬ. ಇದನ್ನು ಹೊಸ ವರ್ಷವೆಂದೂ ಕೂಡ ಕರೆಯಲಾಗುತ್ತದೆ. ಯುಗಾದಿಯಲ್ಲಿ ಬೇವು, ಬೆಲ್ಲದ ಜೊತೆ ಎಣ್ಣೆಸ್ನಾನವೂ ವಿಶೇಷ. ಹಬ್ಬದ ದಿನ ಬೆಳಿಗ್ಗೆ ಸೂರ್ಯೋದಯಕ್ಕೂ ಮುಂಚೆ ಎದ್ದು ಮೈಗೆಲ್ಲಾ ಎಣ್ಣೆ ಹಚ್ಚಿ ಸ್ನಾನ ಮಾಡುವ ಸಂಪ್ರದಾಯವಿದೆ. ಇದಕ್ಕೆ ಅಭ್ಯಂಗ ಅಥವಾ ಅಭ್ಯಂಜನ ಎಂದು ಕರೆಯಲಾಗುತ್ತದೆ.

ಅಭ್ಯಂಗವು ಸಂಪ್ರದಾಯದ ಭಾಗವಾಗಿದ್ದರೂ ಕೂಡ ಇದನ್ನು ಮಾಡುವುದರಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ. ಇದು ಆಯುರ್ವೇದ ಪದ್ಧತಿಯ ಭಾಗವೂ ಆಗಿದೆ. ನಿತ್ಯ ಅಭ್ಯಂಗ ಸ್ನಾನ ಮಾಡುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇನ್ನೇನು ಯುಗಾದಿ ಹಬ್ಬ ಬಂದೇ ಬಿಟ್ಟಿದೆ. ಈ ವರ್ಷ ಮಾರ್ಚ್ 30ಕ್ಕೆ ಯುಗಾದಿ ಹಬ್ಬವಿದೆ. ಯುಗಾದಿಗೂ ಮುಂಚೆ ಅಭ್ಯಂಗ ಸ್ನಾನದ ಮಹತ್ವ ಹಾಗೂ ಇದರ ಪ್ರಯೋಜನಗಳನ್ನು ತಿಳಿದುಕೊಳ್ಳಿ.

ಅಭ್ಯಂಗದಿಂದ ನಮ್ಮ ದೇಹ, ಮನಸ್ಸು ಹಾಗೂ ಇಂದ್ರೀಯಗಳನ್ನು ಪುನರ್ಯೌವನಗೊಳಿಸಲು ಸಾಧ್ಯವಾಗುತ್ತದೆ. ಪ್ರಾಚೀನ ಕಾಲ...