ಭಾರತ, ಫೆಬ್ರವರಿ 22 -- Aase serial today episode: ಸ್ಟಾರ್‌ ಸುವರ್ಣವು ಸೋಷಿಯಲ್‌ ಮೀಡಿಯಾದಲ್ಲಿ ಆಸೆ ಧಾರಾವಾಹಿಯ ಹೊಸ ಪೋಸ್ಟರ್‌ ಹಂಚಿಕೊಂಡಿದೆ. ಅದು ಕಾಣೆಯಾಗಿರುವವರ ಕುರಿತಾದ ಪ್ರಕಟಣೆಯಾಗಿದೆ. ಆ ಪೋಸ್ಟರ್‌ನಲ್ಲಿ ಆಸೆ ಸೀರಿಯಲ್‌ನ ಪಾತ್ರದಾರಿ ಮೀನಾ ಕಾಣೆಯಾಗಿದ್ದಾರೆ ಎಂದು ಬರೆಯಲಾಗಿದೆ. ಈ ಪೋಸ್ಟರ್‌ ವೈರಲ್‌ ಆಗಿದ್ದು, ಕಿರುತೆರೆ ವೀಕ್ಷಕರು ತೋಚಿದಂತೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ರಿಯಲ್‌ ಲೈಫ್‌ಗೆ ತುಂಬಾ ಹತ್ತಿರವಾಗಿರುವ ಕಥೆಯನ್ನು ಹೊಂದಿರುವ ಸೀರಿಯಲ್‌ ಇದಾಗಿರುವುದರಿಂದ ದೊಡ್ಡಮಟ್ಟದ ವೀಕ್ಷಕ ಬಳಗವನ್ನ ಈ ಸೀರಿಯಲ್‌ ಹೊಂದಿದೆ.

"ಕಾಣೆಯಾಗಿದ್ದಾರೆ. ಹೆಸರು: ಮೀನಾ: ವಯಸ್ಸು: 22. ಎತ್ತರ: 5.6. ಸೀರೆ ತೊಟ್ಟಿರುತ್ತಾಳೆ. ಕಾಣೆಯಾದ ದಿನಾಂಕ:21-02-2025. ಮೇಲ್ಕಂಡ ವ್ಯಕ್ತಿಯು ಸಿಕ್ಕಿದ್ದಲ್ಲಿ ಸ್ಟಾರ್‌ ಸುವರ್ಣವನ್ನು ಸಂಪರ್ಕಿಸಿ" ಎಂದು ಪೋಸ್ಟರ್‌ನಲ್ಲಿ ಉಲ್ಲೇಖಿಸಲಾಗಿದೆ.

ನಿನ್ನೆಯವರೆಗೆ ಮೀನಾ ಕಾಣೆಯಾಗಿರಲಿಲ್ಲ. ನಿನ್ನೆಯ ಎಪಿಸೋಡ್‌ನಲ್ಲಿ ಮೀನಾ ಇದ್ದಳು. ಆದರೆ, ಇಂದಿನ ಎಪಿಸೋಡ್‌ನಲ್ಲಿ ಮೀ...