Bangalore, ಮಾರ್ಚ್ 12 -- Aamruthadhaare: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಸೋಮವಾರದ ಸಂಚಿಕೆ 215ರ ಕಥೆ ತಿಳಿದುಕೊಳ್ಳೋಣ. ಮಲ್ಲಿಯನ್ನು ಸಾಯಿಸಲು ಮಾಡಿದ ಪ್ಲ್ಯಾನ್‌ ವಿಫಲವಾದ ಕುರಿತು ಜೈದೇವ್‌ ಚಿಂತೆ ಮಾಡ್ತಾ ಇರ್ತಾನೆ. ಜೈದೇವ್‌ ನೋವಿನಲ್ಲಿದ್ದಾನೆ ಎಂದು ಮಲ್ಲಿ ಉಪಚಾರ ಮಾಡಲು ಬರುತ್ತಾಳೆ. "ನನಗೆ ನನ್ನ ಬಗ್ಗೆ ಚಿಂತೆ ಇಲ್ಲ. ನನ್ನ ಹೊಟ್ಟೆಯಲ್ಲಿ ಬೆಳೆಯುವ ಮಗುವಿನದ್ದೇ ಚಿಂತೆ" ಎಂದೆಲ್ಲ ಮಲ್ಲಿ ಹೇಳುತ್ತಾಳೆ. "ನೀನೇ ಇಷ್ಟ ಇಲ್ಲ. ನಿನ್ನ ಹೊಟ್ಟೆಯಲ್ಲಿರುವ ಮಗುವಿನ ಬಗ್ಗೆ ಯೋಚನೆ ಮಾಡ್ತಿನಾ?" ಎಂದು ಜೈದೇವ್‌ ಹೇಳುತ್ತಾನೆ. ನಾನು ನಿಮ್ಮನ್ನು ಕಟ್ಟಿಕೊಂಡದ್ದು ನನಗೋಸ್ಕರ ಅಲ್ಲ, ನನ್ನ ಮಗುವಿನ ಭವಿಷ್ಯಸ್ಕೋರ ಎಂದು ಮಲ್ಲಿ ಹೇಳುತ್ತಾಳೆ.

ಭೂಮಿಕಾ ಮತ್ತು ಶಕುಂತಲಾದೇವಿ ಮಾತನಾಡುತ್ತ ಇದ್ದಾರೆ. "ನಿನ್ನೆ ರಾತ್ರಿ ಮನೆಯಲ್ಲಿ ಏನು ನಡೆಯಿತು ಎಂದು ಗೊತ್ತಿಲ್ವ?" ಎಂದು ಭೂಮಿಕಾ ಕೇಳುತ್ತಾಳೆ. "ನಿನ್ನೆ ರಾತ್ರಿ ಯಾರು ಇಲ್ಲದೆ ಹೊತ್ತಲ್ಲಿ ಮನೆಗೆ ಒಂದಿಷ್ಟು ಜನರು ಬಂದಿದ್ದರು. ಯಾರೋ ಮನೆಯವರೇ ಇದನ್ನು ಮಾ...