ಭಾರತ, ಫೆಬ್ರವರಿ 5 -- Aadhaar Verification: ಗ್ರಾಹಕರಿಗೆ ಸೇವೆಗಳನ್ನು ಒದಿಸುವುದಕ್ಕಾಗಿ ಆಧಾರ್ ದೃಢೀಕರಣ ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರ ಪುನಃಸ್ಥಾಪಿಸಿದೆ. ಗ್ರಾಹಕ ಸೇವೆಗಳನ್ನು ಪೂರೈಸುವುದಕ್ಕಾಗಿ ಖಾಸಗಿ ಸಂಸ್ಥೆಗಳು ಆಧಾರ್ ದೃಢೀಕರಣವನ್ನು ಬಳಸುವುದಕ್ಕೆ ಅನುಮತಿಸುವುದಕ್ಕಾಗಿ ಆಧಾರ್ ಕಾಯ್ದೆಗೆ ಕೇಂದ್ರ ಸರ್ಕಾರವು ತಿದ್ದುಪಡಿ ಮಾಡಿದೆ. ಕಳೆದ ಶುಕ್ರವಾರ (ಜನವರಿ 31) ಇದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಪ್ರಕಟಿಸಿದೆ. 2018ರ ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರದಲ್ಲಿ ಆಧಾರ್ ದುರ್ಬಳಕೆ ಕಾರಣ ಹಿಂಪಡೆಯಲಾಗಿದ್ದ ವ್ಯವಸ್ಥೆ ಇದಾಗಿತ್ತು. ಈಗ ಮತ್ತೆ ಖಾಸಗಿ ಸಂಸ್ಥೆಗಳವರಿಗೆ ಸಿಕ್ಕಿದೆ.

1) ಆಧಾರ್ ಕಾಯ್ದೆಯ ಸೆಕ್ಷನ್ 57ರ ಶಂಕಿತ ದುರ್ಬಳಕೆ ಕಾರಣ ಸುಪ್ರೀಂ ಕೋರ್ಟ್‌ ಖಾಸಗಿಯವರು ಆಧಾರ್ ದೃಢೀಕರಣ ಬಳಸುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ, ಖಾಸಗಿಯವರು ಆಧಾರ್ ದೃಢೀಕರಣ ಮಾಡುವುದನ್ನು ತಡೆಯಲಾಗಿತ್ತು. ಸೆಕ್ಷನ್‌ 57ರ ಪ್ರಕಾರ, ಖಾಸಗಿ ಸಂಸ್ಥೆಯವರು ವ್ಯವಹಾರದ ಉದ್ದೇಶಗಳಿಗೆ ಆಧಾರ್ ಕೇಳಿ ...