Bengaluru, ಜನವರಿ 29 -- ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ನೀಡಿರುವ ಆಧಾರ್ ಕಾರ್ಡ್ ಇಂದು ನಮಗೆ ಬಹಳಷ್ಟು ಸಂದರ್ಭದಲ್ಲಿ ಬಳಕೆಯಾಗುತ್ತದೆ. ಆಧಾರ್ ಕಾರ್ಡ್ ಬಳಸಿಕೊಂಡು, ಹಲವು ಯೋಜನೆಗಳ ಪ್ರಯೋಜನ ಪಡೆಯಬಹುದು. ಉದ್ಯೋಗಕ್ಕೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಬ್ಸಿಡಿಗೆ ಆಧಾರ್ ಬಳಸಬಹುದು. ಅಲ್ಲದೆ, ಗ್ಯಾಸ್ ಸಂಪರ್ಕ, ವಿದ್ಯುತ್ ಸಂಪರ್ಕ ಮತ್ತು ಉದ್ಯಮ, ವಹಿವಾಟಿಗೆ, ಆರೋಗ್ಯ ಸೇವೆ ಪಡೆಯಲು ಆಧಾರ್ ಕಾರ್ಡ್ ಅಗತ್ಯವಾಗಿ ಬೇಕಾಗುತ್ತದೆ. ಆಧಾರ್ ಕಾರ್ಡ್‌ನಲ್ಲಿರುವ ವಿವರಗಳನ್ನು ಉಚಿತವಾಗಿ ಅಪ್‌ಡೇಟ್ ಮಾಡಲು ಜೂನ್ 14, 2025ರವರೆಗೆ ಗಡುವನ್ನು ಭಾರತೀಯ ಆಧಾರ್ ಪ್ರಾಧಿಕಾರ ವಿಸ್ತರಿಸಿದೆ. ಅದಾದ ನಂತರ ನಿರ್ದಿಷ್ಟ ಶುಲ್ಕ ಪಾವತಿಸಬೇಕಾಗುತ್ತದೆ. ವಿವಿಧ ಕಾರಣಕ್ಕೆ ನಾವು ವಾಸದ ಸ್ಥಳವನ್ನು ಬದಲಾಯಿಸಬೇಕಾಗುತ್ತದೆ. ಶಿಕ್ಷಣ, ಉದ್ಯೋಗ, ಮದುವೆ ಹೀಗೆ ಹಲವು ಕಾರಣಗಳು ಇರಬಹುದು. ಅಂತಹ ಸಂದರ್ಭದಲ್ಲಿ ವಿಳಾಸ ಬದಲಾವಣೆಯನ್ನು ಆಧಾರ್‌ ಕಾರ್ಡ್‌ನಲ್ಲಿ ಮಾಡಬೇಕು. ತಾತ್ಕಾಲಿಕ ಸಂದರ್ಭದಲ್ಲಿ ಇದು ಅನ್ವಯಿಸುವುದಿಲ್ಲ. ನಿ...