Bengaluru, ಏಪ್ರಿಲ್ 4 -- ಘಿಬ್ಲಿ ಸ್ಟೈಲ್ ಇಮೇಜ್ ರಚನೆಯಿಂದಾಗಿ ಮತ್ತೆ ಸುದ್ದಿಯಲ್ಲಿರುವ ಚಾಟ್‌ಜಿಪಿಟಿಯ ಹೊಸ ವೈಶಿಷ್ಟ್ಯ ಭದ್ರತಾ ಆತಂಕ ಮತ್ತು ಹೊಸ ಸಮಸ್ಯೆಗೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ. ChatGPTಗಾಗಿ OpenAI ಇತ್ತೀಚಿಗೆ ಬಿಡುಗಡೆ ಮಾಡಿರುವ GPT-4oರಲ್ಲಿರುವ ಇಮೇಜ್ ಜನರೇಷನ್ ಆಯ್ಕೆಯನ್ನು ಜನರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಹೊಸ ಆತಂಕ ಸೃಷ್ಟಿಯಾಗಿದೆ. ಸ್ಟುಡಿಯೋ ಘಿಬ್ಲಿ-ಶೈಲಿಯ ಫೋಟೊಗಳನ್ನು ರಚಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ಚಾಟ್‌ಜಿಪಿಟಿತ AI ಆಯ್ಕೆಯನ್ನು ಕೆಲವು ಬಳಕೆದಾರರು ನಕಲಿ ಬಿಲ್‌ಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಹಾಗೂ ನಕಲಿ ಆಧಾರ್ ಕಾರ್ಡ್‌ಗಳು ಮತ್ತು ಪಾನ್‌ ಕಾರ್ಡ್‌ಗಳನ್ನು ರಚಿಸಲು ಬಳಸಿಕೊಂಡಿರುವುದು ಆತಂಕ ಸೃಷ್ಟಿಸಿದೆ.

ಬಳಕೆದಾರರು ಚಾಟ್‌ಜಿಪಿಟಿ ತೆರೆದು, ಅದರಲ್ಲಿ ಪ್ರಾಂಪ್ಟ್ ನೀಡುವ ಮೂಲಕ ಚಿತ್ರ ರಚಿಸುವುದು ಮತ್ತು ಈಗಾಗಲೇ ಇರುವ ಫೋಟೊಗಳನ್ನು ಸ್ಟುಡಿಯೋ ಘಿಬ್ಲಿ-ಶೈಲಿಯ ಫೋಟೊಗಳಾಗಿ ಪರಿವರ್ತಿಸುವ ಆಯ್ಕೆ ನೀಡಿರುವುದು ಬಹಳಷ್ಟು ಜನಪ್ರಿಯತೆ ಗಳಿಸಿದೆ....