ಭಾರತ, ಮಾರ್ಚ್ 2 -- ಫುಟ್ಬಾಲ್ ಲೋಕದ ಪ್ರತಿಷ್ಠಿತ ಟೂರ್ನಿ ಫಿಫಾ ವಿಶ್ವಕಪ್ 2026ರಲ್ಲಿ ಜರುಗಲಿದೆ. ಫಿಫಾ ಸದಸ್ಯ ರಾಷ್ಟ್ರಗಳ ಹಿರಿಯ ಪುರುಷರ ರಾಷ್ಟ್ರೀಯ ತಂಡಗಳನ್ನು ಒಳಗೊಂಡ ಪ್ರತಿಷ್ಠಿತ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಯಾಗಿದೆ. ಫಿಫಾ ಮೊದಲಿ ಆರಂಭವಾಗಿದ್ದು 1930ರಲ್ಲಿ. ಅಂದಿನಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಟೂರ್ನಿ ನಡೆಯುತ್ತಿದೆ. 1942 ಮತ್ತು 1946 ರ ಆವೃತ್ತಿಗಳು 2ನೇ ಮಹಾಯುದ್ಧದ ಕಾರಣ ರದ್ದಾಗಿದ್ದವು. ಅರ್ಜೆಂಟೀನಾ ಹಾಲಿ ಚಾಂಪಿಯನ್ ಆಗಿದ್ದು, 2022 ರ ವಿಶ್ವಕಪ್‌ನಲ್ಲಿ ತಮ್ಮ ಮೂರನೇ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಬ್ರೆಜಿಲ್ 5 ವಿಶ್ವಕಪ್ ಪ್ರಶಸ್ತಿಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆದರೆ ಜರ್ಮನಿ 13 ಬಾರಿ ಫೈನಲ್‌ಗೆ ತಲುಪಿದೆ. ಇದು ಜಾಗತಿಕ ಫುಟ್ಬಾಲ್‌ನಲ್ಲಿ ಜರ್ಮನಿ ತಂಡದ ಪ್ರಾಬಲ್ಯ ಎಂತಹದ್ದು ಎಂದು ಒತ್ತಿ ಹೇಳುತ್ತದೆ.

Published by HT Digital Content Services with permission from HT Kannada....