Washington, ಮಾರ್ಚ್ 16 -- ವಾಷಿಂಗ್ಟನ್‌: ಬಾಹ್ಯಾಕಾಶ ಕೇಂದ್ರದಲ್ಲಿಯೇ ಸಿಲುಕಿ ಸತತ ಒಂಬತ್ತು ತಿಂಗಳಿನಿಂದ ಹೊರಗೆ ಬರಲು ಪ್ರಯತ್ನಿಸುತ್ತಿರುವ ಭಾರತದ ಸುನೀತಾ ವಿಲಿಯಮ್ಸ್‌ ಸಹಿತ ವಿವಿಧ ದೇಶಗಳ ನಾಲ್ವರು ಗಗನಯಾತ್ರಿಗಳು ಭೂಮಿಗೆ ಮರಳುವ ದಿನಾಂಕ ನಿಗದಿಯಾಗಿದೆ. ಈಗಾಗಲೇ ಮಾಡಿಕೊಂಡಿರುವ ಸಿದ್ದತೆಯಂತೆ ನಾಲ್ವರು ಮಾರ್ಚ್ 20ರ ಗುರುವಾರದಂದು ನಾಲ್ವರು ಬಾಹ್ಯಾಕಾಶದಿಂದ ಆಗಮಿಸುವ ನಿರೀಕ್ಷೆಯಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಗಗನಯಾತ್ರಿಗಳ ಜೋಡಿ ಮನೆಗೆ ಮರಳಲು ಒಂದು ಹೆಜ್ಜೆ ಹತ್ತಿರದಲ್ಲಿದೆ. ಅಮೆರಿಕದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಅವರ ಸಹವರ್ತಿ ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆತರುವ ಯೋಜನೆಗೆ ಕೊನೆಗೂ ಮೊದಲ ಯಶಸ್ಸು ಸಿಕ್ಕಿದ್ದು. ಭಾನುವಾರದಂದು ಭಾರತೀಯ ಕಾಲಮಾನ 9.40ಕ್ಕೆ ನಾಸಾ ಸ್ಪೇಸ್‌ ಎಕ್ಸ್‌ನಲ್ಲಿ ಪ್ರಯಾಣಿಸಿದ ಕ್ರ್ಯೂ 10 ಸದಸ್ಯರು ಅಂತಾರಾಷ್ಟ್ರೀಯ ಬಾಹ್ಯಾಕಾಶವನ್ನು ತಲುಪಿದ್ದಾರೆ. ಅವರನ್ನು ಭೇಟಿಯಾಗಿರುವ ವಿಡಿಯ...