ಭಾರತ, ಮಾರ್ಚ್ 18 -- Sunita Williams Return: ತಾಂತ್ರಿಕ ದೋಷಗಳಿಂದಾಗಿ ಕಳೆದ 9 ತಿಂಗಳುಗಳಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಅಲ್ಲಿ ಸಿಲುಕಿದ್ದ ನಾಸಾ (NSSA)ದ ಗಗನಯಾತ್ರಿಗಳಾದ ಭಾರತ ಮೂಲದ ಸುನಿತಾ ವಿಲಿಯಮ್ಸ್‌ ಹಾಗೂ ಬುಜ್ ವಿಲ್ಮೋರ್ ಅವರನ್ನು ಭೂಮಿಗೆ ಕರೆ ತರಲು ಸಕಲ ಸಿದ್ಧತೆಗಳು ನಡೆದಿವೆ. ಇಂದು (ಮಾರ್ಚ್ 18) ಭಾರತೀಯ ಕಾಲಮಾನ 8.15 ರಿಂದ ಪ್ರಕ್ರಿಯೆಗಳು ಆರಂಭವಾಗಲಿವೆ. ಇವರು ಭೂಮಿಗೆ ಆಗಮಿಸುವ ಕ್ಷಣಗಳ ನೇರಪ್ರಸಾರಕ್ಕೆ ನಾಸಾ ಪ್ಲಸ್ ಸಿದ್ಧತೆ ನಡೆಸಿದೆ.

ಸ್ಪೇಸ್‌ ಎಕ್ಸ್ ಕ್ರೂ 'ಡ್ರ್ಯಾಗನ್‌' ಈಗಾಗಲೇ ಬಾಹ್ಯಾಕಾಶ ನಿಲ್ದಾಣ ತಲುಪಿದೆ. ಸುನಿತಾ, ಬುಚ್ ಹಾಗೂ ಇತರ ಗಗನಯಾತ್ರಿಗಳನ್ನು ಹೊತ್ತು ನೌಕೆಯು ಫ್ಲಾರಿಡಾ ಕಡಲತೀರಕ್ಕೆ ಬಂದಿಳಿಯಲಿದೆ. ಸುದೀರ್ಘ 17 ಗಂಟೆಗಳ ಪ್ರಯಾಣದ ನಂತರ ಭೂಮಿಯನ್ನು ತಲುಪಲಿದ್ದಾರೆ ಈ ಗಗನಯಾತ್ರಿಗಳು.

ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್‌ ಗಗನನೌಕೆಯಲ್ಲಿ ಕಳೆದ ವರ್ಷ ಜೂನ್ 5ಕ್ಕೆ ಐಎಸ್‌ಎಸ್‌ಗೆ ತೆರಳಿದ್ದ ಸುನಿತಾ ಹಾಗೂ ಮಿಲ್ಮೋರ್ 8 ದಿನಗಳ ನಂತರ ಭೂಮಿಗೆ...