Bengaluru, ಫೆಬ್ರವರಿ 25 -- 8ನೇ ವೇತನ ಆಯೋಗವು ಸರ್ಕಾರಿ ನೌಕರರ ಬಹುಕಾಲದ ಬೇಡಿಕೆಯಾಗಿತ್ತು. ಇತ್ತೀಚೆಗಷ್ಟೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 8ನೇ ವೇತನ ಆಯೋಗವನ್ನು ಘೋಷಿಸುವ ಮೂಲಕ ಸರ್ಕಾರಿ ನೌಕರರಿಗೆ ಉಡುಗೊರೆ ನೀಡಿತು. ಈಗ 8ನೇ ವೇತನ ಆಯೋಗದ ಅನುಷ್ಠಾನವು ಸರ್ಕಾರಿ ನೌಕರರ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಸಂಬಳ ಎಷ್ಟು ಹೆಚ್ಚಾಗುತ್ತದೆ? 8ನೇ ವೇತನ ಆಯೋಗದಲ್ಲಿ ಸಂಬಳವನ್ನು ನಿರ್ಧರಿಸುವ ಅಂಶ ಯಾವುದು? ಈ ಬಗ್ಗೆ ತಿಳಿಯೋಣ.

ಸರ್ಕಾರಿ ನೌಕರರ 1 ರಿಂದ 6ರವರೆಗಿನ ವಿವಿಧ ವೇತನ ಶ್ರೇಣಿಗಳನ್ನು ವಿಲೀನಗೊಳಿಸಲು ಸಲಹೆ ನೀಡಲಾಗಿದೆ. ಇದು ಸಾಧ್ಯವಾದಲ್ಲಿ ವೇತನ ಶ್ರೇಣಿ ಇನ್ನೂ ಸರಳವಾಗುತ್ತವೆ. ರಾಷ್ಟ್ರೀಯ ಜಂಟಿ ಸಮಾಲೋಚನಾ ಕಾರ್ಯವಿಧಾನವು, ಹಂತ 1ರ ನೌಕರರನ್ನು ಹಂತ 2ರೊಂದಿಗೆ, ಹಂತ 3 ನೌಕರರನ್ನು ಹಂತ 4ರೊಂದಿಗೆ ಮತ್ತು ಹಂತ 5 ನೌಕರರನ್ನು ಹಂತ 6ರೊಂದಿಗೆ ವಿಲೀನಗೊಳಿಸಲು ಶಿಫಾರಸು ಮಾಡಿದೆ.

ಎಲ್ಲಾ ಸಲಹೆಗಳ ಆಧಾರದ ಮೇಲೆ, ಫಿಟ್‌ಮೆಂಟ್ ಪ್ರಮಾ...