ಭಾರತ, ಏಪ್ರಿಲ್ 28 -- ಕ್ರಿಕೆಟ್‌ನಲ್ಲಿ ಪ್ರತಿದಿನ ಅನೇಕ ದಾಖಲೆಗಳು ನಿರ್ಮಾಣವಾಗುತ್ತವೆ. ಕೆಲವು ಮುರಿಯುತ್ತವೆ. ಕೆಲವು ಮುರಿಯಲು ಅಸಾಧ್ಯ. ಆದಾಗ್ಯೂ, ಕೆಲವು ಆಟಗಾರರು ತಮ್ಮ ವಿಶಿಷ್ಟತೆಯಿಂದ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇಲ್ಲೊಬ್ಬ ಕ್ರಿಕೆಟರ್​ ತಮ್ಮ 21 ವರ್ಷಗಳ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದಲ್ಲಿ ಒಂದೇ ಒಂದು ನೋ ಬಾಲ್ ಎಸೆಯದೆಯೇ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದಾರೆ ಎಂಬ ವಿಷಯ ನಿಮಗೆ ಗೊತ್ತಾ?

ಉದ್ದೇಶಪೂರ್ವಕವಾಗಿ ನೋಬಾಲ್ ಅನ್ನು ಯಾರೂ ಎಸೆಯುವುದಿಲ್ಲ. ಕೆಲ ಬೌಲರ್‌ಗಳಂತೂ ಹೆಚ್ಚಾಗಿ ನೋ ಬಾಲ್‌ಗಳನ್ನು ಎಸೆಯುವುದೇ ಕೆಲಸ ಮಾಡಿಕೊಂಡಿರುತ್ತಾರೆ. ಕೆಲವೊಮ್ಮೆ ತಪ್ಪಾಗಿ ಸಂಭವಿಸಿದರೆ, ಕೆಲವರು ವಿಕೆಟ್ ಪಡೆದಿದ್ದರ ಎಸೆತವನ್ನು ನೋ-ಬಾಲ್ ಹಾಕಿರ್ತಾರೆ. ಇಂತಹ ತಪ್ಪುಗಳಿಂದಾಗಿ ತಂಡಗಳು ಹೆಚ್ಚಾಗಿ ಪಂದ್ಯಗಳನ್ನು ಸೋಲುತ್ತವೆ. ಆದರೀಗ ತನ್ನ ವೃತ್ತಿಜೀವನದಲ್ಲಿ ಒಂದೇ ಒಂದು ನೋ ಬಾಲ್ ಎಸೆಯದ ಬೌಲರ್ ಬಗ್ಗೆ ತಿಳಿದುಕೊಳ್ಳೋಣ.

ಇದನ್ನೂ ಓದಿ: ಕಳೆದ ವರ್ಷ ಬಿಸಿಸಿಐ ಕೇಂದ್...