ಭಾರತ, ಏಪ್ರಿಲ್ 2 -- ತುಮಕೂರು: ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ವಡ್ಡಗೆರೆ ಗ್ರಾಮದ 850 ವರ್ಷಗಳ ಇತಿಹಾಸವುಳ್ಳ ಶ್ರೀವೀರನಾಗಮ್ಮ ತಾಯಿಯ ಯುಗಾದಿ ಜಾತ್ರಾ ಮಹೋತ್ಸವ ಲಕ್ಷಾಂತರ ಮಂದಿ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಪ್ರತಿವರ್ಷ ಯುಗಾದಿ ಮರುದಿನ ನಡೆಯುವ ಶ್ರೀವೀರನಾಗಮ್ಮ ತಾಯಿ ಜಾತ್ರೆಯು ರಥೋತ್ಸವದೊಂದಿಗೆ ವಿಜೃಂಭಣೆಯಿಂದ ನಡೆದಿದೆ, ಈ ವರ್ಷ ದೇವಾಲಯದ ಆಡಳಿತ ಮಂಡಳಿಯಿಂದ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ತೇರಿನ ರಥದಲ್ಲಿ ವೀರನಾಗಮ್ಮ ತಾಯಿ ಮೆರವಣಿಗೆ ವಿಗ್ರಹ ರಥದಲ್ಲಿ ಕೂರಿಸಿ ಸಾಂಪ್ರಾದಾಯಿಕ ಸಕಲ ಪೂಜೆ ನೆರವೇರಿಸಿದ ಬಳಿಕ ಎಲೆರಾಂಪುರ ಶ್ರೀಮಠದ ಡಾ.ಹನುಮಂತನಾಥ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ತಾಯಿಗೆ ಇಷ್ಟಾರ್ಥ ಈಡೇರಿಸುವಂತೆ ಪೂಜೆ ಸಲ್ಲಿಸಿ ಹರಕೆ ತೀರಿಸಿ ವೀರನಾಗಮ್ಮ ತಾಯಿಯ ರಥ ಎಳೆದು ತಾಯಿಯ ವೈಭವ ಕಣ್ತುಂಬಿಕೊಂಡರು. ಆಗಮಿಸಿದ ಭಕ್ತಾದಿಗಳಿಗೆ ಆಡಳಿತ ಮಂಡಳಿಯಿಂದ ವಿಶೇಷ ದರ್ಶನ ವ್ಯವಸ್ಥೆ, ಪ್ರಸಾದ ವ್ಯವಸ್ಥೆ ...