ಬೆಂಗಳೂರು, ಮೇ 14 -- ರೈಲ್ವೆ ನೇಮಕಾತಿ ಮಂಡಳಿಯು (Railway Recruitment Board -RRB) 2025ರ ಆರ್‌ಆರ್‌ಬಿ ಎನ್‌ಟಿಪಿಸಿ (Non-Technical Popular Categories) ಪರೀಕ್ಷೆ ದಿನಾಂಕಗಳನ್ನು ಬಿಡುಗಡೆ ಮಾಡಿದೆ. ಆರ್‌ಆರ್‌ಬಿ ನಾನ್-ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಗಳಿಗೆ (ಪದವೀಧರ) ನೋಂದಾಯಿಸಿಕೊಂಡ ಅಭ್ಯರ್ಥಿಗಳು ಪ್ರಾದೇಶಿಕ ಆರ್‌ಆರ್‌ಬಿಗಳ ಅಧಿಕೃತ ವೆಬ್‌ಸೈಟ್‌ನಲ್ಲಿ ಸಿಬಿಟಿ 1 ಪರೀಕ್ಷೆಯ ದಿನಾಂಕಗಳ ಅಧಿಸೂಚನೆ ಪರಿಶೀಲಿಸಬಹುದು.

ಆರ್‌ಆರ್‌ಬಿ ಎನ್‌ಟಿಪಿಸಿ 8113 ಪದವೀಧರ ಮಟ್ಟದ ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಇದರಲ್ಲಿ 1736 ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್‌ವೈಸರ್ ಹುದ್ದೆಗಳು ಸೇರಿವೆ. ಇದರೊಂದಿಗೆ 994 ಸ್ಟೇಷನ್ ಮಾಸ್ಟರ್, 3144 ಗೂಡ್ಸ್ ಟ್ರೈನ್ ಮ್ಯಾನೇಜರ್, 1507 ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ ಮತ್ತು 732 ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಆರ್‌ಆರ್‌ಬಿ ಎನ್‌ಟಿಪಿಸಿ ಕಂಪ್ಯೂಟರ್ ಆಧಾರಿತ ಪರೀಕ್ಷೆ 1, ಜೂನ್ 5ರಿಂದ ಜೂನ್ 23ರವರೆಗೆ...